ಟೆನ್ನಿಸ್ ಡಬಲ್ಸ್‌ ಪಂದ್ಯದಲ್ಲಿ ವೈದ್ಯ ಡಾ. ಸುಬ್ಬರಾವ್, ವಕೀಲ ಮಂಜುನಾಥ್‌ ಅವರಿಗೆ ಮೊದಲ ಸ್ಥಾನ

ಟೆನ್ನಿಸ್ ಡಬಲ್ಸ್‌ ಪಂದ್ಯದಲ್ಲಿ ವೈದ್ಯ ಡಾ. ಸುಬ್ಬರಾವ್,  ವಕೀಲ ಮಂಜುನಾಥ್‌ ಅವರಿಗೆ ಮೊದಲ ಸ್ಥಾನ

ದಾವಣಗೆರೆ, ಡಿ. 17- ಮೂರು ದಿನಗಳ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿಯು ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದ ಸಿಂಥೆಟಿಕ್ ಕೋರ್ಟ್, ದಾವಣಗೆರೆ ಕ್ಲಬ್ ಹಾಗೂ ಆಫೀಸರ್‌ ಕ್ಲಬ್‌ನ ಕ್ಲೇ ಕೋರ್ಟುಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು 435 ಕ್ರೀಡಾ ಪಟುಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. 

ಈ ಪಂದ್ಯಾವಳಿಯಲ್ಲಿ 65 ವಯಸ್ಸಿನ ಡಬಲ್ಸ್ ವಿಭಾಗದಲ್ಲಿ ದಾವಣಗೆರೆಯ ಆಫೀಸರ್‌ ಕ್ಲಬ್‌ನ ಡಾ. ಸುಬ್ಬರಾವ್ ಹಾಗು ವಕೀಲ ಜಿ.ಆರ್. ಮಂಜುನಾಥ್ ಅವರುಗಳು ಮೊದಲನೇ ಸ್ಥಾನ ಪಡೆದು, ಚಾಂಪಿಯನ್ಸ್ ಆಗಿದ್ದಾರೆ.

error: Content is protected !!