116 ಪ್ಯಾಸೆಂಜರ್ ರೈಲುಗಳಿಗೆ ಮರುಸಂಖ್ಯೆ

116 ಪ್ಯಾಸೆಂಜರ್ ರೈಲುಗಳಿಗೆ ಮರುಸಂಖ್ಯೆ

ದಾವಣಗೆರೆ, ಡಿ.17- ನೈರುತ್ಯ ರೈಲ್ವೆ ವಲಯದ 116 ಪ್ಯಾಸೆಂಜರ್ ವಿಶೇಷ ರೈಲುಗಳನ್ನು ನಿಯಮಿತ ರೈಲು ಸಂಖ್ಯೆಗಳೊಂದಿಗೆ ಮರುಸಂಖ್ಯೆ ನೀಡಲು ನಿರ್ಧರಿಸಿದೆ. ಅಸ್ತಿತ್ವದಲ್ಲಿರುವ `0′ ಸಂಖ್ಯೆಯ ವ್ಯವಸ್ಥೆಯನ್ನು `5′, `6′ ಅಥವಾ `7′ ರಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ ಬದಲಾಯಿಸಲಾಗುವುದು. ಈ ಬದಲಾವಣೆ ಜನವರಿ 1, 2025 ರಿಂದ ಜಾರಿಗೆ ಬರಲಿದೆ. ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ಪರಿಷ್ಕೃತ ರೈಲು ಸಂಖ್ಯೆಗಳನ್ನು ಗಮನಿಸಬೇಕು ಎಂದು ನೈರುತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಹೊಸ ನಿಯಮಿತ ರೈಲು ಸಂಖ್ಯೆಗಳನ್ನು ತಿಳಿಯಲು, ದಯವಿಟ್ಟು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://swr.indianrailways.gov.in/view_detail.jsp?lang=0&dcd=8122&id=0,4,268

error: Content is protected !!