ಕದಳಿ ಮಹಿಳಾ ವೇದಿಕೆಯ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಸೂತಿ ತಜ್ಞರಾದ ಡಾ. ಸುಷ್ಮಾ ನಾಡಗೌಡ
ದಾವಣಗೆರೆ, ಡಿ. 17- ಕ್ಯಾನ್ಸರ್ ಎಂದರೆ ಜೀವಕೋಶಗಳ ಅಸಹಜ ಬೆಳವಣಿಗೆ. ಪ್ರಯೋಗಾಲಯ ಪರೀಕ್ಷೆ ಅಥವಾ ಎಕ್ಸ್‌ರೇ ಮೂಲಕ ಕ್ಯಾನ್ಸರ್ ಅನ್ನು ಪ್ರಾಸಂಗಿಕವಾಗಿ ಪತ್ತೆ ಹಚ್ಚಬಹುದು ಎಂದು ಪ್ರಸೂತಿ ತಜ್ಞರಾದ ಡಾ. ಸುಷ್ಮಾ ನಾಡಗೌಡ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿನ ತರಳಬಾಳು ಸಭಾ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಂಗ ಸಂಸ್ಥೆ ಕದಳಿ ಮಹಿಳಾ ವೇದಿಕೆಯ ಸರ್ವ ಸದಸ್ಯರ ಸಾಮಾನ್ಯ ಸಭೆ, 160 ನೇ ಕಮ್ಮಟದಲ್ಲಿ ಶರಣ ಮಾದಾರ ಚನ್ನಯ್ಯ ಮತ್ತು ಶರಣ ಒಕ್ಕಲಿಗರ ಮುದ್ದಣ್ಣ ಸ್ಮರಣೆ, ಆರೋಗ್ಯ ಜಾಗೃತಿ ಹಾಗೂ ಸದಸ್ಯರಿಗೆ ಆಟೋಟಸ್ಪರ್ಧೆಗಳ ಕಾರ್ಯಕ್ರಮದಲ್ಲಿ `ಸರ್ವಿಕಲ್ ಕ್ಯಾನ್ಸರ್ ಮತ್ತು ಬ್ರೆಸ್ಟ್ ಕ್ಯಾನ್ಸರ್’ ಕುರಿತು ಅವರು ಉಪನ್ಯಾಸ ನೀಡಿದರು.
ಪ್ರಮುಖವಾಗಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠ ಕ್ಯಾನ್ಸರ್ ಎಂದು ಎರಡು ವಿಧದ ಕ್ಯಾನ್ಸರ್‌ಗಳನ್ನು ಕಾಣು ತ್ತೇವೆ. ಸ್ತನ ಕ್ಯಾನ್ಸರ್‌ಗಾಗಿ ಸ್ಕ್ರೀನಿಂಗ್ ಕ್ಲಿನಿಕಲ್ ಪ್ರಯೋ ಗಗಳು ಜನರನ್ನು ಒಳಗೊಂಡಿರುವ ಸಂಶೋಧನಾ ಅಧ್ಯಯನಗಳಾಗಿವೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರೋಗ ನಿರ್ಣಯದ ಕ್ಯಾನ್ಸರ್ ಪ್ರಕಾರವಾಗಿ ಉಳಿದಿದೆ.
ಗರ್ಭಕಂಠದ ಕೋಶಗಳಲ್ಲಿನ ಪೂರ್ವಭಾವಿ ಬದಲಾವಣೆಗಳು ಅಪರೂಪವಾಗಿ ರೋಗ ಲಕ್ಷಣಗಳನ್ನು ಉಂಟು ಮಾಡುತ್ತವೆ.ಕ್ಯಾನ್ಸರ್ ಆಗಿ ಬೆಳೆಯಬಹುದಾದ ಸಹಜವಾದ ಜೀವಕೋಶಗಳು ಇವೆಯೇ ಎಂದು ತಿಳಿದುಕೊಳ್ಳುವ ಏಕೈಕ ಮಾರ್ಗವೆಂದರೆ ಗರ್ಭಕಂಠದ ಸ್ಕ್ರೀನಿಂಗ್ ಪರೀಕ್ಷೆ.
ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠ ಕ್ಯಾನ್ಸರ್ ರೋಗ ಲಕ್ಷಣಗಳು, ಪರೀಕ್ಷೆಗಳು, ಚಿಕಿತ್ಸೆಯ ಮಾರ್ಗೋಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳಾದ ಗಾಯತ್ರಿ ವಸ್ತ್ರದ್, ಕುಸುಮಾ ಲೋಕೇಶ್, ನೀಲಗುಂದ ಜಯಮ್ಮ, ಆಶಾ ಮಹಾಬಲೇಶಗೌಡ್ರು, ಪಲ್ಲವಿ ಉಮೇಶ್, ವಿಜಯ ಚಂದ್ರಶೇಖರ್, ಲಕ್ಷ್ಮೀ ಮಲ್ಲಿಕಾರ್ಜುನ್, ಸೌಮ್ಯ ಸತೀಶ್, ವಸಂತ, ನಿರ್ಮಲ ಶಿವಕುಮಾರ್, ಪೂರ್ಣಿಮಾ ಪ್ರಸನ್ನಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಂತರ ಕದಳಿ ಮಹಿಳಾ ವೇದಿಕೆ ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಯಿತು. ರತ್ನಾ ರಡ್ಡಿ ಆಯವ್ಯಯ ಮಂಡಿಸಿದರು. ನಂದಿನಿ ಗಂಗಾಧರ ಸ್ವಾಗತಿಸಿದರು. ವಾಣಿ ರಾಜ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಾಂತಲಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ಚಂದ್ರಿಕಾ ಮಂಜುನಾಥ್ ನಿರೂಪಿಸಿದರು.