ಎಗ್ಗಿಲ್ಲದ ಗಾಂಜಾ ಮಾರಾಟ ; ಕಡಿವಾಣಕ್ಕೆ ಒತ್ತಾಯ

ಎಗ್ಗಿಲ್ಲದ ಗಾಂಜಾ ಮಾರಾಟ ; ಕಡಿವಾಣಕ್ಕೆ ಒತ್ತಾಯ

ದಾವಣಗೆರೆ, ಡಿ.17- ಗಾಂಜಾ ಹಾಗೂ ನಶಾ ಪದಾರ್ಥಗಳ ಅನಧಿಕೃತ ಮಾರಾಟ ಮಾಡುವವರ ಬಗ್ಗೆ ಕಾನೂನು ಕ್ರಮ ವಹಿಸುವಂತೆ ಜಿಲ್ಲಾ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಗಾಂಜಾ ಹಾಗೂ ಇನ್ನಿತರೆ ನಶಾ ಪದಾರ್ಥಗಳು ಯಥೇಚ್ಛವಾಗಿ ಯಾವುದೇ ಹೆದರಿಕೆ ಇಲ್ಲದೆ ನಗರದಲ್ಲಿ, ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ಹಳ್ಳಿಗಳಲ್ಲಿ ಗಾಂಜಾ ಪದಾರ್ಥವನ್ನು ಹೊಲಗಳಲ್ಲಿ ಬೆಳೆದು ಮಾರಾಟ ಮಾಡುವುದು ಸಹಜವಾಗಿದೆ. ಇದು ದಿನ ದಿನಕ್ಕೂ ಹೆಚ್ಚಾಗುತ್ತಿದ್ದು, ಪೊಲೀಸರು ಇದರ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಲಾಯಿತು.

ಗಾಂಜಾ ಸೇವನೆಯಿಂದ ಯುವಕರು ಹಾಗೂ ಯುವತಿಯರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳು ತ್ತಿದ್ದು, ಮಕ್ಕಳ ಭವಿಷ್ಯ ಎದುರು ನೋಡುತ್ತಿರುವ ಪೋಷಕರ ಕನಸು ನುಚ್ಚುನೂರಾಗುತ್ತಿದೆ. ಈಗಾಗಲೇ ಸಾಕಷ್ಟು ಕೊಲೆ, ಸುಲಿಗೆ, ದರೋಡೆ ಹಾಗೂ ಅಪಘಾತದಂತಹ ಸಮಾಜಕ್ಕೆ ಮಾರಕವಾಗುವ ಆಘಾತಕಾರಿ ಕ್ರಿಯೆಗಳಲ್ಲಿ ಈ ಮಾದಕ ವಸ್ತುಗಳ ಪಾತ್ರವು ದೊಡ್ಡದಿದೆ. ಪೊಲೀಸರು ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗದಿದ್ದರೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

error: Content is protected !!