ಕುಮಾರಸ್ವಾಮಿ ಹುಟ್ಟುಹಬ್ಬ : ಮಕ್ಕಳಿಗೆ ಹಣ್ಣು ವಿತರಣೆ

ಕುಮಾರಸ್ವಾಮಿ ಹುಟ್ಟುಹಬ್ಬ : ಮಕ್ಕಳಿಗೆ ಹಣ್ಣು ವಿತರಣೆ

ದಾವಣಗೆರೆ, ಡಿ. 17- ಕೇಂದ್ರ ಸರ್ಕಾರದ ಬೃಹತ್  ಕೈಗಾರಿಕಾ ಮತ್ತು ಉಕ್ಕಿನ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ವಿರಕ್ತ ಮಠದ ಶಾಲಾ ಮಕ್ಕಳಿಗೆ ಹಣ್ಣುಗಳನ್ನು  ವಿತರಿಸಲಾಯಿತು. ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ. ಕಾರ್ಯದರ್ಶಿ ಗಣೇಶ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಜಿ. ಅಮಾನುಲ್ಲಾ ಖಾನ್, ಎಸ್ಸಿ ಘಟಕದ ಅಧ್ಯಕ್ಷ ಕಡತಿ ಅಂಜನಪ್ಪ, ಸಿ. ಎಸ್, ಓಂಕಾರಪ್ಪ, ಧನಂಜಯ್, ಶ್ರೀನಿವಾಸ್, ಗಾಯತ್ರಿ ಹಾಲೇಶ್, ಸುನಂದಮ್ಮ, ಹೊನ್ನಮ್ಮ, ಗಂಗಾಧರಪ್ಪ, ವಿಜಯೇಂದ್ರ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!