ದಾವಣಗೆರೆ, ಡಿ. 18- ನಗರದ ಲೇಬರ್ ಕಾಲೋನಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿಕೊಂಡು ಗುರುಸ್ವಾಮಿ ಮುರುಗನ್ ಸ್ವಾಮಿ ನೇತೃತ್ವದ ತಂಡವು ನಗರದಿಂದ ಶಬರಿಮಲೆಗೆ ಒಂದು ಸಾವಿರ ಕಿ.ಮೀ. ಪಾದಯಾತ್ರೆ ಮೂಲಕ ತೆರಳಿತು.
ಪಾದಯಾತ್ರೆಯು ಹೊಳಲ್ಕೆರೆ, ಅರಸೀಕೆರೆ ಮಾರ್ಗವಾಗಿ ಚನ್ನರಾಯ ಪಟ್ಟಣ, ಮೈಸೂರು, ನಂಜನಗೂಡು, ಬಂಡೀಪುರ, ಗುರುವಾಯೂರು, ತ್ರಿಶೂರ್, ಅಂಗಮಲೇ, ಎರಿಮಲೈ, ಶಬರಿಮಲೈ ತಲುಪುವುದು.
ಪಾದಯಾತ್ರಿಗಳಾದ ಚೇತನ್‌ಸ್ವಾಮಿ, ಮಹಾದೇವಸ್ವಾಮಿ ನಾಗೇನಹಳ್ಳಿ, ರೂಪೇಶ್ ಸ್ವಾಮಿ, ಮಂಜುನಾಥ ರಾಮನಗರ ಇವರುಗಳಿಗೆ ಗುರುಸ್ವಾಮಿ ಪುರುಷೋತ್ತಮ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪಾದಯಾತ್ರೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು.