ನಗರದಲ್ಲಿ ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪ ಹುಟ್ಟುಹಬ್ಬ

ನಗರದಲ್ಲಿ ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪ ಹುಟ್ಟುಹಬ್ಬ

ದಾವಣಗೆರೆ, ಡಿ. 16- ನಾಡು ಕಂಡ ಹಿರಿಯ ರಾಜಕೀಯ ಮುತ್ಸದ್ಧಿ, ರಾಷ್ಟ್ರ ನಾಯಕ, ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ನವರ 122 ನೇ ಜಯಂತಿಯನ್ನು ನಿಜಲಿಂಗಪ್ಪ ಅಭಿಮಾನಿ ಬಳಗ ದಿಂದ ನಿಜಲಿಂಗಪ್ಪ ಬಡಾವಣೆಯ ನಿಜಲಿಂಗಪ್ಪ ಉದ್ಯಾನವನದಲ್ಲಿ ಆಚರಿಸಲಾಯಿತು 

ನಿಜಲಿಂಗಪ್ಪನವರ ಆಡಳಿತದಲ್ಲಿ ಜನಪರ ಚಿಂತನೆ, ಜನಪರ ಆಡಳಿತ ಸಮರ್ಪಣೆ ಹಾಗೂ ಸ್ವಾಭಿಮಾನ ಆಡಳಿತಕ್ಕೆ ರಾಜಕಾರಣ ಮೀಸಲಾಗಿತ್ತು. ಈಗಿನ ರಾಜಕೀಯ ಆಡಳಿತ ಸ್ವಾರ್ಥ, ಸ್ವಜನ ಪಕ್ಷಪಾತ, ದುರಾಸೆ ಹಾಗೂ ಜಾತಿ ವ್ಯವಸ್ಥೆಗೆ ಮೀಸಲಾಗಿದೆ. ಇದು ವಿಪರ್ಯಾಸದ ಸಂಗತಿಯೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. 

ನಿಜಲಿಂಗಪ್ಪ ಅಭಿಮಾನಿ ಬಳಗದ ಸದಸ್ಯ ರಾದ ದೇವಿಕೆರೆ ಪ್ರಭಾಕರ್,  ಪಾಲಿಕೆ ಮಾಜಿ ಸದಸ್ಯ ಬಿ. ಲೋಕೇಶ್, ಶಿವನಳ್ಳಿ ರಮೇಶ್, ಬೇತೂರು ದೇವೇಂದ್ರಪ್ಪ, ಪ್ರಿಂಟಿಂಗ್ ಪ್ರೆಸ್ ನಿರಂಜನ್, ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾ ಅಧ್ಯಕ್ಷ ಐಗೂರು ಚಂದ್ರಣ್ಣ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!