ನವದೆಹಲಿ, ಡಿ.16- ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಪಿ.ಎಂ. ಪೋಷಣ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಪಾಲಿನಲ್ಲಿ ಅಡುಗೆ ತಯಾರಕರ ಗೌರವ ಧನದ ವ್ಯತ್ಯಾಸ ಮನಗಂಡು ಶೀಘ್ರವೇ ಕರ್ನಾಟಕ ರಾಜ್ಯ ಸರ್ಕಾರದ ಮಾದರಿಯಲ್ಲಿ ಸರಿದೂಗಿಸುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸದನಕ್ಕೆ ಆಗ್ರಹಿಸಿದರು.
ದೇಶಾದ್ಯಂತ 1.27 ಮಿಲಿಯನ್ ಶಾಲೆ ಗಳಲ್ಲಿ 120 ಮಿಲಿಯನ್ ಮಕ್ಕಳಿಗೆ, ಮಕ್ಕಳ ದಾಖಲಾತಿ ಹಾಗೂ ಅವರಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲು ಸರ್ಕಾರಿ ಶಾಲೆಗಳು, ಅಂಗನವಾಡಿ ಹಾಗೂ ಮದರಸಗಳಲ್ಲಿ ಉಚಿತ ಆಹಾರ ನೀಡ ಲಾಗುತ್ತಿದೆ. ಈ ಯೋಜನೆಯು ವಿಶ್ವದಾದ್ಯಂತ ಅತ್ಯಂತ ಪ್ರಮುಖ ಹಾಗೂ ವಿಶೇಷವಾಗಿದೆ.
ಬಿಸಿಯೂಟ ತಯಾರಕರಿಗೆ ಗೌರವ ಧನದಲ್ಲಿ ಕೇಂದ್ರದ ಪಾಲು ಶೇ.60 ಮತ್ತು ರಾಜ್ಯದ ಪಾಲು ಶೇ.40 ಗೌರವ ಧನವನ್ನು ಬಿಸಿಯೂಟ ತಯಾರಕರಿಗೆ ನೀಡಲಾಗುತ್ತಿದ್ದು, ಮುಖ್ಯ ಅಡುಗೆ ತಯಾರಕರಿಗೆ ರೂ.3700 ಹಾಗೂ ಸಹಾಯಕರಿಗೆ ರೂ.3600 ಪಾವತಿಸಲಾಗುತ್ತಿದೆ. ಈ ಪೈಕಿ ರಾಜ್ಯ ಸರ್ಕಾರ ರೂ.3000 ಭರಿಸುತ್ತಿದ್ದು, ಕೇಂದ್ರ ಸರ್ಕಾರವು ಕೇವಲ ರೂ.600 ಭರಿಸುತ್ತಿದೆ.
ರಾಜ್ಯ ಸರ್ಕಾರ ಯೋಜನೆಯ ಪ್ರಾರಂಭದಿಂ ದಲೂ ರೂ.400 ರಿಂದ ಗೌರವ ಧನ ಹೆಚ್ಚಿಸುತ್ತಾ ಬಂದಿದ್ದು, ಪ್ರಸ್ತುತ ಪ್ರತಿ ತಿಂಗಳು ರೂ.3000 ಮುಟ್ಟಿರುತ್ತದೆ. ಆದರೆ ಕೇಂದ್ರದ ಪಾಲು ಕೇವಲ ರೂ.600 ರಲ್ಲಿಯೇ ಸ್ಥಗಿತವಾಗಿದ್ದು, ಯಾವುದೇ ರೀತಿಯ ಹೆಚ್ಚಳ ಮಾಡಿರುವುದಿಲ್ಲ.
ಪ್ರಾರಂಭದಿಂದಲು ಅಡುಗೆ ತಯಾರಕರನ್ನು ಕೇವಲ ಸ್ವಯಂ ಸೇವಕರೆಂದು ಪರಿಗಣಿಸಲಾಗಿ ದೆಯೇ ಹೊರತು, ಪಿಂಚಣಿ ಮತ್ತು ಭವಿಷ್ಯ ನಿಧಿ ಸೌಲಭ್ಯ ಪಡೆಯುವ ಉದ್ಯೋಗಿಗಳೆಂದು ಪರಿಗಣಿಸಿಲ್ಲ. ಇದರಿಂದ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಾಗಿರುವ ಈ ವರ್ಗಕ್ಕೆ ಜೀವನ ನಿರ್ವಹಣೆ ಕಷ್ಟಕರವಾಗಿದೆ.
3700 ರೂ. ಗೌರವ ಧನದಿಂದ ಅಗತ್ಯ ಸೇವೆಗಳನ್ನು ಪೂರೈಸಿಕೊಳ್ಳಲು ಬಿಸಿಯೂಟ ತಯಾರಕರಿಗೆ ಆಗುತ್ತಿಲ್ಲ. ಇದನ್ನು ಮನಗಂಡು ಕೇಂದ್ರ ಸರ್ಕಾರದ ಪಾಲಾದ ಶೇ.60 ರಷ್ಟು ಗೌರವ ಧನವನ್ನು ರಾಜ್ಯ ಸರ್ಕಾರಗಳಿಗೆ ಅನು ಗುಣವಾಗಿ ಶೀಘ್ರವೇ ಹೆಚ್ಚಿಸಿ, ಸರಿದೂಗಿಸಲು ಕೇಂದ್ರ ಸರ್ಕಾರಕ್ಕೆ ಪ್ರಭಾ ಒತ್ತಾಯಿಸಿದರು.