ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾರತೀಯ ಲೋಕ ಪರಂಪರೆ- ಕಲಾಯಾನ

ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ  ಭಾರತೀಯ ಲೋಕ ಪರಂಪರೆ- ಕಲಾಯಾನ

ದಾವಣಗೆರೆ, ಡಿ.16- ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ  ಭಾರತೀಯ ಲೋಕ ಪರಂಪರೆ’ ಶೀರ್ಷಿಕೆಯಡಿ ಕಲಾಯಾನ@24 ರ  ಮೊದಲ ದಿನದ ಶಾಲಾ ವಾರ್ಷಿಕೋತ್ಸವವು ಮೊನ್ನೆ ಸಂಭ್ರಮದಿಂದ ಜರುಗಿತು.   

ಕರ್ನಾಟಕದ ಉತ್ತರ ವಿಭಾಗದ ಸಿಬಿಎಸ್ಇ ಶಾಲೆಗಳ ಆಡಳಿತ ಪ್ರಮುಖರು ಹಾಗೂ  ಸ್ಥಳೀಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಣ್ಣ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ,   ಸಮಾಜದ ಎಲ್ಲಾ  ಸ್ತರಗಳಲ್ಲಿಯೂ ಕಾರ್ಯ ವೈಖರಿಯನ್ನು  ವ್ಯಾಪಿಸಿಕೊಂಡಿರುವು ದಲ್ಲದೇ, ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣದಲ್ಲಿನ ರಾಷ್ಟ್ರೋತ್ಥಾನ ಪರಿಷತ್ ಮತ್ತು ವಿದ್ಯಾಕೇಂದ್ರಗಳ ಪಾತ್ರ ತಿಳಿಸಿದರು.  

ಮುಖ್ಯ  ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳು ಹಾಗೂ ಪ್ರಾಂಶುಪಾಲರಾದ  ಡಾ. ಕೆ.ಎಚ್. ತುಳಸಿ ರಾಮನ್ ಮಾತನಾಡಿ, ಭವ್ಯ ಭಾರತದ ಭಾವಿ ಪ್ರಜೆಗಳನ್ನು ರೂಪಿಸುವಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಾಲೆಗಳ ಪಾತ್ರವನ್ನು  ಕೊಂಡಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾ ಖೆಯ  ಉಪನಿರ್ದೇಶಕ ಕೊಟ್ರೇಶ್ ಮಾತನಾಡಿ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ದೊರೆಯುವ ಸಂಸ್ಕಾರ ಭರಿತ ಶಿಕ್ಷಣ, ಶಿಸ್ತು ಬದ್ಧ ಆಚಾರ-ವಿಚಾ ರಗಳನ್ನು ಮನಸಾರೆ ಪ್ರಶಂಸಿಸಿದರು.   

ಶಾಲಾ ಸಂಚಾಲಕ ಶಂಭುಲಿಂಗಪ್ಪ, ಸದಸ್ಯ ರಾದ ಶ್ರೀಮತಿ ಭಾರತಿ ಹೆಗಡೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್, ಶಾಲೆಯ ಪ್ರಾಂಶುಪಾಲ ಮಂಜುನಾಥ್ ಮತ್ತು ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕು. ಜ್ಯೋತಿ ಮತ್ತು ವಿದ್ಯಾರ್ಥಿಗಳ ತಂಡದವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಾರತೀಯ ಯೋಗ ಪರಂಪರೆಯನ್ನು ರಮೇಶ್ ಹಾಗೂ ಶ್ರೀಮತಿ ಗೀತಾ ಮಾರ್ಗ ದರ್ಶನದಲ್ಲಿ ಪ್ರದರ್ಶಿಸಲಾಯಿತು. 

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಾವೇರಿ ಹಾಗೂ ಶ್ರೀಮತಿ ಕೆ. ವಿ. ಮಂಜಳ  ನೆರವೇರಿಸಿದರು. ಸ್ವಾಗತ ಭಾಷಣವನ್ನು ಮಾಧ್ಯಮಿಕ ಹಂತದ ಉಪಪ್ರಾಂಶುಪಾಲ ಶಶಿಧರ್ ಬಿರಾದಾರ್ ಮಾಡಿದರು. ವಂದನಾರ್ಪಣೆಯನ್ನು ಪ್ರಾಥಮಿಕ ಹಂತದ ಉಪಪ್ರಾಂಶುಪಾಲರಾದ  ಶ್ರೀಮತಿ ರೂಪ  ನೆರವೇರಿಸಿದರು.

error: Content is protected !!