ಮಲೇಬೆನ್ನೂರು, ಡಿ.16- ಮಳೆ ಹಾನಿಯಿಂದ ಮನೆ ಕುಸಿತವಾಗಿರುವ ಕಾರಣದಿಂದ ಹೊಸಪಾಳ್ಯ ಗ್ರಾಮದ ಮೀನಾಕ್ಷಮ್ಮ ಹಾಗೂ ರೇಣುಕಮ್ಮ ಎಂಬ ಫಲಾನುಭವಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿರುವ ಸಹಾಯ ಧನದ ಚೆಕ್ ಅನ್ನು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸಿರಿಗೆರೆ ನಾಗನಗೌಡ್ರು ಮತ್ತು ಯೋಜನೆಯ ಹಿರಿಯ ನಿರ್ದೇಶಕ ಎಂ. ಲಕ್ಷ್ಮಣ್ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಯೋಜನಾಧಿ ಕಾರಿ ವಸಂತ್ ದೇವಾಡಿಗ ಹಾಗೂ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪರಶುರಾಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಭರಮಗೌಡ್ರು, ಭೀಮನಗೌಡ್ರು, ವಸಂತಪ್ಪ, ಕೆರೆ ಸಮಿತಿಯ ಸದಸ್ಯರಾದ ತಿಪ್ಪೇಶಪ್ಪ, ಗದಿಗೆಪ್ಪ, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ರಂಗಸ್ವಾಮಿ ಮತ್ತು ಸ್ಥಳೀಯ ಸೇವಾ ಪ್ರತಿನಿಧಿ ಮಂಗಳ ಹಾಗೂ ಶುದ್ಧ ಪ್ರೇರಕ ಸಂತೋಷ್ ಮತ್ತಿತರರು ಹಾಜರಿದ್ದರು.