ದಾವಣಗೆರೆ, ಡಿ.15- ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ `ಚಿರಂತನ ಅಕಾಡೆಮಿ’ ವಿದ್ಯಾರ್ಥಿನಿಯರು ಜಾನಪದ ಸಮಕಾಲೀನ ಹಾಗೂ ಫ್ಯೂಷನ್ ನೃತ್ಯಗಳನ್ನು ಪ್ರದರ್ಶಿಸಿದರು. ವಿಭಿನ್ನ ರೀತಿಯ ಪ್ರಸ್ತುತಿಗಳನ್ನೊಳ ಗೊಂಡ ಈ ನೃತ್ಯಗಳ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ನೃತ್ಯದಲ್ಲಿ ಸಿರಿ ಪದ್ಮಿನಿ, ವೈಷ್ಣವಿ ಎನ್, ವೈಷ್ಣವಿ ಆರ್ ಎಂ, ತನುಜಾ, ಆರ್ನವಿ, ಸಮೀಕ್ಷಾ, ಖುಷಿ ಎಂ ಎ, ಸಂಸ್ಕೃತಿ, ಆರ್ನ, ಅದಿತಿ, ಗಮ್ಯಶ್ರೀ, ಜೋತ್ಸ್ನಾ ಪ್ರಿಯ, ವಿನಂತಿ, ಮೈತ್ರಿ, ಅಕ್ಷತಾ, ತನುಶ್ರೀ, ಚಾರ್ವಿ, ತೇಜಶ್ರೀ, ಸೃಷ್ಟಿ ಪಾಟೀಲ್, ಮೋಕ್ಷಗಂಗ, ಖುಷಿ, ಶ್ರೇಯ, ಸಾನ್ವಿ, ಶಾಲಿನಿ, ಆದ್ಯ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.