ಸಾಂಸ್ಕೃತಿಕ ಸಂಗೀತ `ಜುಗಲ್ ಬಂದಿ’ಯಲ್ಲಿ ಜಿ.ಬಿ. ವಿನಯ್
ದಾವಣಗೆರೆ, ಡಿ.15- ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳ ಮೇಲೆ ಹೆಚ್ಚಿನ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ತಿಳಿಸಿದರು.
ಜಾಗರಣ ಮಂಚ್ ಕರ್ನಾಟಕ ಮತ್ತು ಸಂಸ್ಕಾರ ಭಾರತಿ ಸಹಯೋಗದಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ `ಸ್ವದೇಶ ಮೇಳದಲ್ಲಿ’ ಸಾಂಸ್ಕೃತಿಕ ಸಂಗೀತ `ಜುಗಲ್ ಬಂದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಾವಣಗೆರೆಯಲ್ಲಿ ಸ್ವದೇಶಿಯ ಬಗ್ಗೆ ಜಾಗೃತಿ ಮಾಡುವ ನಿಟ್ಟಿನಲ್ಲಿ ಸ್ವದೇಶಿ ಮೇಳ ನಡೆಯುತ್ತಿದ್ದು, ಇಲ್ಲಿ ಹಾಕಲಾಗಿರುವ ಸ್ಟಾಲ್‌ಗಳು ಮಾರಾಟ ಮಾಡಿ ಹಣ ಸಂಪಾದಿಸಲು ಬಂದಿಲ್ಲ. ಬದಲಾಗಿ ದೇಶದ ಮೇಲಿನ ಅಭಿಮಾನ ಹೆಚ್ಚಿಸಲು ಮತ್ತು ಜಾಗೃತಿ ಮೂಡಿಸಲು ಬಂದಿವೆ. ಆದ್ದರಿಂದ ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಮೇಯರ್ ಎಸ್.ಟಿ ವೀರೇಶ್, ಸಿದ್ಧಗಂಗಾ ಸಂಸ್ಥೆಯ ರೇಖಾರಾಣಿ, ಭಾರತೀಯ ಯೋಗ ಒಕ್ಕೂಟದ ವಾಸುದೇವ ರಾಯ್ಕರ್ ಸೇರಿದಂತೆ ಇತರರು ಇದ್ದರು.