ಯೋಗ ಶಿಕ್ಷಕ ವಿಶ್ವನಾಥ್ ಕುಲಕರ್ಣಿ ಬಣ್ಣನೆ
ದಾವಣಗೆರೆ, ಡಿ. 13- ಭಾರತದ ವೈವಿಧ್ಯ ಮಯ ಸಾಂಪ್ರದಾಯಿಕ ನೃತ್ಯಗಳು, ಸನಾತನ ಧರ್ಮದ ಸಂಸ್ಕೃತಿಯ ಪ್ರತೀಕವಾಗಿವೆ. ಪ್ರಪಂಚದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಯಟ್ನಾಂನ ವಿ ಯೋಗ ವರ್ಲ್ಡ್ ಸೆಂಟರ್ ನ ಅಧ್ಯಕ್ಷ ಹಾಗೂ ಮುಖ್ಯ ಯೋಗ ಶಿಕ್ಷಕ ಯೋಗಾ ಚಾರ್ಯ ವಿಶ್ವನಾಥ್ ಕುಲಕರ್ಣಿ ಬಣ್ಣಿಸಿದರು.
ನಗರದ ಆಂಜನೇಯ ಬಡಾವಣೆಯ ನಮನ ಅಕಾಡೆಮಿ ಭರತನಾಟ್ಯ ತರಬೇತಿ ಶಾಲೆಯಲ್ಲಿ ನಮನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಡೆದ ನೃತ್ಯ-ಯೋಗ ನಮನ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ನಮನ ಅಕಾಡೆಮಿ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಗರದ ಆಚೆಯ ದೂರದ ವಿಯಟ್ನಾಂ ದೇಶದಲ್ಲಿ ಪ್ರತಿ ವರ್ಷವೂ ಭಾರತ – ವಿಯಟ್ನಾಂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಭಾರತದ ಅವಿಯಾ ಯೋಗ ಅಕಾಡೆಮಿಯೊಂದಿಗೆ, ಜೊತೆಗೂಡಿ ನಡೆಸಿದ ಕೀರ್ತಿ ವಿ ಯೋಗ ವರ್ಲ್ಡ್ ಸಂಸ್ಥೆಗೆ ಸಲ್ಲುತ್ತದೆ ಎಂದು ತಿಳಿಸಿದರು.
ಅತಿಥಿಗಳಾಗಿ ಅವಿಯಾ ಅಕಾಡೆಮಿಯ ಕಾರ್ಯದರ್ಶಿ ಹೆಚ್.ಟಿ. ಸುಮಾ, ನಮನ ಅಕಾಡೆಮಿಯ ಭರತನಾಟ್ಯ ಗುರು ವಿದುಷಿ ಡಿ.ಕೆ. ಮಾಧವಿ, ಯೋಗಾಚಾರ್ಯ ವೈದ್ಯ ತೀರ್ಥರಾಜ್ ಹೋಲೂರ್, ಪಂಚಲಿಂಗಪ್ಪ ಕವಲೂರ, ಉಮೇಶ್ ಕುಲಕರ್ಣಿ, ಮಹೇಶ್ ಕುಲಕರ್ಣಿ, ಮಂಜು ಮತ್ತು ಇತರರು ಉಪಸ್ಥಿತರಿದ್ದರು.