ಯೋಗಚಾರ್ಯ ಡಾ. ಪರಶುರಾಮ್ ಅವರಿಗೆ ರಾಜ್ಯೋತ್ಸವ ಪುರಸ್ಕಾರ

ಯೋಗಚಾರ್ಯ ಡಾ. ಪರಶುರಾಮ್ ಅವರಿಗೆ ರಾಜ್ಯೋತ್ಸವ ಪುರಸ್ಕಾರ

ದಾವಣಗೆರೆ, ಡಿ. 11- ಇತ್ತೀಚಿಗೆ ಬೆಂಗಳೂರು ನಗರದ ಸದಾಶಿವ ನಗರದಲ್ಲಿ 50ನೇ ಸುವರ್ಣ ಮಹೋತ್ಸವ ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ನಗರದ ಎಸ್ಎಎಸ್ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಯೋಗ ಪಟು ಯೋಗಚಾರ್ಯ ಡಾ. ಎನ್. ಪರಶುರಾಮ್ ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಸ್ತು ತಜ್ಞ ದಿನೇಶ್ ಗುರೂಜಿ, ಚಲನಚಿತ್ರ ನಿರ್ದೇಶಕ ಮೋಹನ್‌ಕುಮಾರ್, ನಟಿ ಶ್ವೇತಾ ಸ್ರೀವಾತ್ಸವ, ಚಿತ್ರಸಂತೆಯ ರೂವಾರಿ ಗಿರೀಶ್ ಗೌಡ, ಶ್ರೀಮತಿ ಮಾನಸ ವಲ್ಲ ಉಪಸ್ಥಿತರಿದ್ದರು.

error: Content is protected !!