ಆರೋಗ್ಯ ಜೀವನಕ್ಕೆ ಸ್ವಚ್ಛತೆ ಮುಖ್ಯ

ಆರೋಗ್ಯ ಜೀವನಕ್ಕೆ ಸ್ವಚ್ಛತೆ ಮುಖ್ಯ

ಹರಿಹರ, ಡಿ.15- ಆರೋಗ್ಯಯುಕ್ತ ಜೀವನ ನಡೆಸಲು, ಮನೆಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿರಿಸಬೇಕು ಎಂದು ಆರೋಗ್ಯ ಇಲಾಖೆಯ ಶೈಲಜಾ ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭೀಮ್ ನಗರ ಬಡಾವಣೆಯಲ್ಲಿ ಜ್ಞಾನವಿಕಾಸ ಹಾಗೂ ಸೃಜನಶೀಲ ಕಾರ್ಯಕ್ರಮದಡಿ ಹಸಿಕಸ, ಒಣಕಸ ವಿಲೇವಾರಿ ಮತ್ತು ವಿಂಗಡಣೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಬಡಾವಣೆಯನ್ನು ಸ್ವಚ್ಛತೆಯಿಂದ ಇರಿಸಿಕೊಂಡರೆ ಎಲ್ಲರೂ ರೋಗದಿಂದ ದೂರವಿರಬಹುದು. ಆದ್ದರಿಂದ ಬಡಾವಣೆ ನಿವಾಸಿಗಳೆಲ್ಲರೂ ಹಸಿ ಮತ್ತು ಒಣ ಕಸವನ್ನು ಸರಿಯಾಗಿ ಬೇರ್ಪಡಿಸಿ, ನಗರಸಭೆ ಗಾಡಿಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಗುತ್ತಿಗೆದಾರ ಜಗದೀಶ್ ಮಾತನಾಡಿದರು. ಇದೇ ವೇಳೆ 50 ಜನರಿಗೆ ಫಿನಾಯಿಲ್‌ ಮತ್ತು ಬ್ಲೀಚಿಂಗ್ ಪೌಡರ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಆರ್‌. ಭಾರತಿ, ಸ್ಥಳೀಯ ಸೇವಾ ಪ್ರತಿನಿಧಿ ಸುಧಾ ಮತ್ತು ಸ್ವ-ಸಹಾಯ ಸಂಘ  ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಇದ್ದರು.

error: Content is protected !!