ಹೊನ್ನಾಳಿ, ಡಿ. 12 – ದೊಡ್ಡಕೇರಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿಯಿಂದ ಕಾರ್ತಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎರಡನೇ ದಿನದ ಕುಸ್ತಿ ಪಂದ್ಯಾವಳಿಯು ಗುರುವಾರ ನಡೆಯಿತು. ಸುಮಾರು 60 ರಿಂದ 70 ಕುಸ್ತಿಪಟುಗಳು ಕುಸ್ತಿ ಪಂದ್ಯದಲ್ಲಿ ಆಡಿದ್ದು ವಿಶೇಷ ವಾಗಿತ್ತು. ಇಂದು 3 ಗಂಟೆಗೆ ಆರಂಭವಾದ ಕುಸ್ತಿ ಪಂದ್ಯಗಳು ರಾತ್ರಿ 7 ಗಂಟೆಯವರೆಗೂ ನಡೆದವು.
ಇಂದು ನಡೆದ ಕುಸ್ತಿ ಪಂದ್ಯದಲ್ಲಿ ಕೊಲ್ಲಾಪುರ, ಸೊಲ್ಲಾಪುರ, ಶಿವಮೊಗ್ಗ, ದಾವಣಗೆರೆ, ರಾಣೇಬೆನ್ನೂರು, ಶಿಕಾರಿಪುರ, ಮಾಸೂರು, ಮುಂಡಗೋಡು ಸೇರಿದಂತೆ ರಾಜ್ಯ ವಿವಿಧ ಭಾಗಗಳಿಂದ ಯುವ ಪೈಲ್ವಾನರು ಭಾಗವಹಿಸಿದ್ದರು. ರೂ. 1 ಸಾವಿರದಿಂದ 5 ಸಾವಿರದವರೆಗೆ ಬಹುಮಾನದ ಮೊತ್ತವನ್ನು ಪೈಲ್ವಾನರಿಗೆ ನೀಡಿ ಗೌರವಿಸಲಾಯಿತು. ಬೆಳ್ಳಿ ಬಳೆಗಳು, ಗಿಫ್ಟ್ ಗಳು ಸೇರಿದಂತೆ ಹಲವಾರು ಕೊಡುಗೆಗಳನ್ನು ಪೈಲ್ವಾನರಿಗೆ ನೀಡಲಾಯಿತು.
ಇಂದು ಕೊನೆಯ ಕುಸ್ತಿ ಪಂದ್ಯ : ಶುಕ್ರವಾರ ಮೂರನೇ ದಿನದ ಕೊನೆಯ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಈ ಪಂದ್ಯದಲ್ಲಿ ರಾಷ್ಟ್ರಮಟ್ಟದ ನಾಲ್ವರು ಪೈಲ್ವಾನರಿಗೆ ಆಹ್ವಾನ ನೀಡಿದ್ದು, ಅವರಿಗೆ 50 ಸಾವಿರ ರೂ. ನಗದು ಬಹುಮಾನ ಹಾಗೂ ಬೆಳ್ಳಿಗದೆಯನ್ನು ಘೋಷಣೆ ಮಾಡಲಾಗಿದೆ ಎಂದು ಕುಸ್ತಿ ಕಮಿಟಿಯ ಅಧ್ಯಕ್ಷ ಎಚ್.ಬಿ. ಅಣ್ಣಪ್ಪ ತಿಳಿಸಿದರು.
ನಾಳೆ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ರವರೆಗೆ ಕುಸ್ತಿ ನಡೆಯಲಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ದೇವರ ಗಣಮಕ್ಕಳು ಪ್ರಭುಸ್ವಾಮಿ, ಅಣ್ಣಪ್ಪ ಸ್ವಾಮಿ, ಎಚ್.ಬಿ. ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ಗೌಡ್ರು ನರಸಪ್ಪ, ಎಚ್.ಡಿ. ವಿಜೇಂದ್ರಪ್ಪ, ಗಾಳಿ ನಾಗರಾಜ್, ದಿಡಗೂರು ಪಾಲಾಕ್ಷಪ್ಪ, ಮಾಜಿ ಸೈನಿಕ ಎಂ. ವಾಸಪ್ಪ, ಎಂ.ಎಸ್. ಪಾಲಾಕ್ಷಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್‍ಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಸೇರಿದಂತೆ ಇತರರು ಭಾಗವಹಿಸಿದ್ದರು.