ಹಲ್ಲೆ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಸರ್ಕಾರ ಕ್ಷಮೆ ಯಾಚಿಸಲು ಆಗ್ರಹ

ಹಲ್ಲೆ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಸರ್ಕಾರ ಕ್ಷಮೆ ಯಾಚಿಸಲು ಆಗ್ರಹ

ಹೊನ್ನಾಳಿ : ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಪ್ರಕರಣ 

ಹೊನ್ನಾಳಿ, ಡಿ. 12 –  ಬೆಳಗಾವಿಯ ಸುವರ್ಣಸೌಧದ ಬಳಿ ಪಂಚಮಸಾಲಿ ಸಮುದಾಯಧ ಹೋರಾಟಗಾರರ ಮೇಲೆ ನಡೆದ ಲಾಠಿ ಪ್ರಹಾರವನ್ನು ಖಂಡಿಸಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದವರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿ ಭಟನೆ ನಡೆಸಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣ ಶೆಟ್ಟಿ ಒತ್ತಾಯಿಸಿದರು.

ಅವರು ಹೊನ್ನಾಳಿ ತಾಲ್ಲೂಕು ಪಂಚಮಸಾಲಿ ಘಟಕವು ಬೆಳಗಾವಿ ಘಟನೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ತಹಶೀಲ್ದಾರ್ ಪಟ್ಟರಾಜಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ವೀರಶೈವ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ  ಬೆನಕನಹಳ್ಳಿ ವೀರಣ್ಣ, ಪ್ರಧಾನ ಕಾರ್ಯದರ್ಶಿ ಹಾಲೇಶ್ ಕುಂಕೋದ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾಯಿ ಬಸವರಾಜ್, ಯುವ ಘಟಕದ ಅಧ್ಯಕ್ಷ ಸಾಹಿ ಹಾಲೇಶ್, ನಗರ ಘಟಕದ ಅಧ್ಯಕ್ಷ ಗಿರೀಶ್, ಪುರಸಭಾ ಮಾಜಿ ಸದಸ್ಯ ಪೇಟೆ ಪ್ರಶಾಂತ್, ಮೃತ್ಯುಂಜಯ ಪಾಟೀಲ್, ಕಾಶಿನಾಥ್, ಮಹಾಂತೇಶ್, ಕೊಟ್ರೇಶ್, ರುದ್ರಣ್ಣ, ವಿಶ್ವಣ್ಣ ಇನ್ನಿತರರಿದ್ದರು.

error: Content is protected !!