ಆಮ್‌ ಆದ್ಮಿ ಸದಸ್ಯತ್ವಕ್ಕೆ ಚಾಲನೆ

ಆಮ್‌ ಆದ್ಮಿ ಸದಸ್ಯತ್ವಕ್ಕೆ ಚಾಲನೆ

ಹರಿಹರ, ಡಿ. 11- ನಗರದಲ್ಲಿ ಆಮ್‌ ಆದ್ಮಿ ಪಾರ್ಟಿ ವತಿಯಿಂದ ಸದಸ್ಯರನ್ನು ಗುರುತಿಸಲು ಆಪ್ ಪರಿವಾರ್ ಬಿಡುಗಡೆ ಮತ್ತು ಸದಸ್ಯತ್ವ ನೋಂದಣಿಗೆ ನೀಡಲಾಗುವುದು ಎಂದು ಆಮ್‌ ಆದ್ಮಿ ಪಾರ್ಟಿ ತಾಲ್ಲೂಕು ಅಧ್ಯಕ್ಷ ಜಿ.ಹೆಚ್. ಬಸವರಾಜ್ ಹಲಸಬಾಳ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ತಾಲ್ಲೂಕು  ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ತಯಾರಿ ಮಾಡಿಕೊಳ್ಳುವ ಬಗ್ಗೆ ತಿಳಿದುಬಂದಿದ್ದು, ಇದರಿಂದಾಗಿ ತಾಲ್ಲೂಕಿನಲ್ಲಿ ಆಮ್ ಆದ್ಮಿ ಪಕ್ಷವನ್ನು ಸದೃಢವಾಗಿ ಕಟ್ಟುವುದರ ಜೊತೆಗೆ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸುವ ದೃಷ್ಠಿಯಿಂದ ಸದಸ್ಯತ್ವವನ್ನು ಮಾಡಲಿಕ್ಕೆ ಪಕ್ಷ ಮುಂದಾಗಿದೆ. ಸರ್ವ ಸದಸ್ಯರನ್ನು ಗುರುತಿಸಲು ಆಫ್ ಪರಿವಾರ್ ಬಿಡುಗಡೆ ಮತ್ತು ಸದಸ್ಯತ್ವ ಚಾಲನೆಗೆ ಮುಂದಾಗಿದೆ ಎಂದು ಹೇಳಿದರು.

ಇತ್ತೀಚಿಗೆ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಕಚೇರಿಯಲ್ಲಿ ಹರಿಹರ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿರೆಡ್ಡಿ ಹಾಗೂ ರಾಜ್ಯ ಕಾರ್ಯದರ್ಶಿ ಬಸವರಾಜ್ ಮುದಿಗೌಡ್ರು, ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ, ಅವರು ಹಾಗೂ ಇತರೆ ಪ್ರಮುಖ ಮುಖಂಡರ ಸಮಕ್ಷಮದಲ್ಲಿ ಆಯ್ಕೆ ಮಾಡಲಾಗಿದೆ.

ತಾಲ್ಲೂಕು ಅಧ್ಯಕ್ಷರಾಗಿ ಜಿ.ಹೆಚ್. ಬಸವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಯೂಸೂಫ್, ಕಾರ್ಯದರ್ಶಿ ಎಸ್.ಪಿ. ರೋಹಿತ್, ಸಹ ಕಾರ್ಯದರ್ಶಿ ಸೈಯದ್ ರಹೀಮ್, ಸಂಘಟನಾ ಕಾರ್ಯದರ್ಶಿ ನಾಗೇನಹಳ್ಳಿ ವೀರಭದ್ರಪ್ಪ, ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಚಂದ್ರಪ್ಪ ದೇವರಬೆಳಕೆರೆ, ಯುವ ಘಟಕದ ಅಧ್ಯಕ್ಷ ಜಿಯಾವುಲ್ಲಾ, ಫುಟ್‌ಪಾತ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಲ್ತಾಫ್, ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ಸಾಗರ್ ಬೊಂಗಾಳೆ, ನಗರ ಘಟಕದ ಅಧಕ್ಷರಾಗಿ ಬಿ. ಮಲ್ಲೇಶ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ರೇಕಾ ಬಿ.ಆಡೂರು, ಪ್ರಧಾನ ಕಾರ್ಯದರ್ಶಿ ಜೀಶಾನ್ ಮಲ್ಲಿಕ್, ಎಸ್ಸಿ, ಎಸ್ಟಿ ಕಾರ್ಯದರ್ಶಿ ಎ.ಕೆ. ಮಂಜಣ್ಣ ವಾಸನ, ಸಂಘಟನಾ ಕಾರ್ಯದರ್ಶಿ ಜಿಯಾಬಾಷಾ, ಕಾರ್ಯದರ್ಶಿ ಮಹಮ್ಮದ್ ಇರ್ಫಾನ್, ಸಂಘಟನಾ ಕಾರ್ಯದರ್ಶಿ ಅಲ್ಪಸಂಖ್ಯಾತ ಘಟಕದ ಮಹಮ್ಮದ್ ಬಾಷಾ, ಕಾರ್ಯದರ್ಶಿ ಮಹಮ್ಮದ್ ಮುಸ್ತಾಫಾ, ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತ ಘಟಕದ ಮಹಮ್ಮದ್ ಇರ್ಫಾನ್, ಸಂಘಟನಾ ಕಾರ್ಯದರ್ಶಿ ದಾದಾಪೀರ್, ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಗಂಗಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಬಿ.ಮಲ್ಲೇಶ್, ಮಹಮ್ಮದ್ ಯೂಸಫ್, ಕೆ. ರವೀಂದ್ರ, ಸೈಯದ್ ಸಾದತ್, ರೇಖಾ ಬಿ.ಆಡೂರು, ಜಿಯಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!