ದಾವಣಗೆರೆ, ಡಿ. 11- ದಾವಣಗೆರೆ ಟೆನ್ನಿಸ್ ಸಂಸ್ಥೆ ವತಿಯಿಂದ ನಡೆಸುವ 10,12.14,16ವರ್ಷಗಳ ಒಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಗಳನ್ನು ಅಧ್ಯಕ್ಷ ಡಾ. ಬ್ಯಾಡಗಿ ಉದ್ಘಾಟಿಸಿದರು.
ಒಟ್ಟು 110 ಸ್ಪರ್ಧಿಗಳು ಭಾಗವಹಿಸಿದ್ದು, ನಗರ ಸೇರಿದಂತೆ ರಾಜ್ಯದ ಬೆಳಗಾವಿ, ವಿಜಾಪುರ, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಮೈಸೂರು ಅಲ್ಲದೇ ಗೋವಾ ಮತ್ತು ಡೆಲ್ಲಿಯ ಮಕ್ಕಳೂ ಭಾಗವಹಿಸಿರುವುದು ಈ ಬಾರಿಯ ವಿಶೇಷವಾಗಿದೆ.
ಭಾರತೀಯ ಮೂಲದ ಆಸ್ಟ್ರೇಲಿಯಾ ವಾಸಿ ಭಾಗವಹಿಸಿರುವುದು ಅತಿ ವಿಶೇಷ ಆಗಿದೆ. ದಾವಣಗೆರೆಯ ಕನಿಷ್ಕ ಮತ್ತು ಶಿವಮೊಗ್ಗದ ನಿಧೀಶ್ ಈಗಾಗಲೇ 8 ರ ಹಂತಕ್ಕೆ ತಲುಪಿದ್ದು, ಉಳಿದ ಪಂದ್ಯಗಳು ಇನ್ನೂ ನಡೆಯುತ್ತಿವೆ.
ಸಂಸ್ಥೆಯ ಮಾಜಿ ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ ಉದ್ಘಾಟನೆಯಲ್ಲಿ ಭಾಗವಹಿಸಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕರುಗಳು ದಾವಣಗೆರೆಯ ಟೆನ್ನಿಸ್ ಆಟಗಾರರು ಮತ್ತು ಕ್ರೀಡಾಭಿಮಾನಿಗಳು ಹಾಜರಿದ್ದು ಪಂದ್ಯಾವಳಿಗೆ ಶುಭ ಕೋರಿರುತ್ತಾರೆ.