ದಾವಣಗೆರೆ, ಡಿ. 11- ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆದೇಶದ ಮೆರೆಗೆ ನಿಟುವಳ್ಳಿ ಶಕ್ತಿ ನಗರ ಮುಖಾಂತರ ರೈಲ್ವೆ ಅಂಡರ್ ಪಾಸ್‌ನಿಂದ ಆವರಗೆರೆ ಪಿ.ಬಿ. ರಸ್ತೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಪ್ರಾರಂಭಿಸುವ ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನಿ ಗಣೇಶ್, ಸಚಿವರ ಆಪ್ತ ಸಹಾಯಕ ನಾಗರಾಜ್, ಆಯುಕ್ತರಾದ ರೇಣುಕಾ, ಕಾಂಗ್ರೆಸ್ ಮುಖಂಡರಾದ ಹುಲ್ಮನೆ ಗಣೇಶ್, ಆವರಗೆರೆ ಕರಿಗೌಡ, ಇಟ್ಟಿಗುಡಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.