ಅವೈಜ್ಞಾನಿಕ ಸೇತುವೆಯಿಂದ ಅಪಘಾತಗಳು ಪರ್ಯಾಯ ವ್ಯವಸ್ಥೆಗೆ ಸಂಸದರಿಂದ ಒತ್ತಡ

ಅವೈಜ್ಞಾನಿಕ ಸೇತುವೆಯಿಂದ ಅಪಘಾತಗಳು   ಪರ್ಯಾಯ ವ್ಯವಸ್ಥೆಗೆ ಸಂಸದರಿಂದ ಒತ್ತಡ

ದಾವಣಗೆರೆ, ಡಿ. 11 – ಭೂಮಿಕ ನಗರದಿಂದ ರಾಮ ನಗರಕ್ಕೆ ಸಾಗುವ ರಸ್ತೆಯಲ್ಲಿ ಅವೈಜ್ಞಾನಿಕ ವಾಗಿ ನಿರ್ಮಾಣ ಗೊಂಡಿರುವ ಕೆಳ ಸೇತುವೆಯಿಂದ ಹಲವಾರು ಅಪಘಾತಗಳಿಗೆ ಹಾಗೂ ಟ್ರಾಫಿಕ್ ಜಾಮ್‌ಗೆ  ಎಡೆಮಾಡಿ ಕೊಟ್ಟಿರುತ್ತದೆ.

ಈ ಸೇತುವೆಯು ಕಿರಿದಾಗಿದ್ದು ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ಘಟಕಕ್ಕೆ ಹೋಗುವ ಭಾರೀ ವಾಹನಗಳು ಮತ್ತು ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳು ಜತೆಯಲ್ಲಿ ಇತರೆ ಭಾರಿ ವಾಹನಗಳು ಸಾಗುತ್ತಿರುತ್ತವೆ. ಸೇತುವೆಯು 2x4x4.5 ಮೀ. ವಿಸ್ತಾರ ಹೊಂದಿದ್ದು ಹಲವಾರು ಅವಘಡಗಳಿಗೆ ಕಾರಣವಾಗಿದೆ.

ಇದರ ಬಗ್ಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಅವರು ಪೊಲೀಸ್ ಇಲಾಖೆ, ರಾಜ್ಯ ರಸ್ತೆ ನಿಗಮ, ಲೋಕೋಪಯೋಗಿ ಇಲಾಖೆ, ಇತರೆ ಇಲಾಖೆಗಳಿಂದ ಮಾಹಿತಿ ತರಿಸಿ ಇದರ ಬಗ್ಗೆ ಸಂಸತ್ತಿನಲ್ಲಿ ಸಂಸದರು ಪ್ರಶ್ನಿಸಿದ್ದು ಅತೀ ಶೀಘ್ರವೇ ಇದಕ್ಕೆ ಪರಿಹಾರವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲು ಒತ್ತಡ ಹೇರಿದರು.

error: Content is protected !!