ಡ್ರ್ಯಾಗನ್ ವಾರಿಯರ್ಸ್ ಮಾರ್ಷಲ್ ಪ್ರಥಮ

ಡ್ರ್ಯಾಗನ್ ವಾರಿಯರ್ಸ್ ಮಾರ್ಷಲ್ ಪ್ರಥಮ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

ದಾವಣಗೆರೆ, ಡಿ. 11- ನಗರದಲ್ಲಿ ಈಚೆಗೆ ಕರ್ನಾಟಕ ಒಕಿನವ ರಿಯೊ ಶೋರಿನ ಸಂಸ್ಥೆ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾನಗರದ ಡ್ರ್ಯಾಗನ್ ವಾರಿಯರ್ಸ್ ಮಾರ್ಷಲ್ ಕರಾಟೆ ವಿದ್ಯಾರ್ಥಿಗಳಾದ ಗಗನ್ ರಾಜ್,  ವಿಸ್ಮಯ ಹಾಗೂ ಸುಕೃತಾ ಅವರುಗಳು ಆಯಾ ವಯೋ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ವಿದ್ಯಾನಗರ ವಾಯುವಿಹಾರ ಬಳಗದಿಂದ ಬಹುಮಾನಿತ ಮಕ್ಕಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು, ಲೇಖಕರೂ ಆದ ಬಾ.ಮ. ಬಸವರಾಜಯ್ಯ, ನಿವೃತ್ತ ವಾರ್ತಾಧಿಕಾರಿ ಕರಿಯಪ್ಪ, ತರಬೇತುದಾರ ಸಾದಿಕ್ ಬಾಷಾ ಸೇರಿದಂತೆ ಬಹುಮಾನಿತ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

error: Content is protected !!