ದಾವಣಗೆರೆ, ಡಿ.10- ನಗರದ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕಿನ ಹಿರಿಯ ನಿರ್ದೇಶಕ ಕೆ.ಎಸ್. ಮಹೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಅಧ್ಯಕ್ಷರಾಗಿದ್ದ ಎನ್.ಜಿ. ಗುರುಸಿದ್ದಯ್ಯ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.
ಬ್ಯಾಂಕಿನ ಉಪಾಧ್ಯಕ್ಷ ಎನ್.ಎಂ. ನಿರಂಜನ್ ನಿಶಾನಿಮಠ ಅವರು ಮಹೇಶ್ವರಪ್ಪ ಅವರ ಹೆಸರನ್ನು ಸೂಚಿಸಿದಾಗ, ನಿರ್ದೇಶಕ ಎನ್.ವಿ. ಬಂಡಿವಾಡ ಅವರು ಅನುಮೋದಿಸಿದರು.
ನಿರ್ದೇಶಕರುಗಳಾದ ಬಿ.ಹೆಚ್. ಪರಶುರಾಮಪ್ಪ, ಶ್ರೀಮತಿ ಎನ್.ಎಂ. ಪಂಕಜ ವೀರಯ್ಯ, ವಿಕಾಸ್ ಕುಮಾರ್, ಕೆ.ಆರ್. ರವೀಂದ್ರನಾಥ್, ಶ್ರೀಮತಿ ಆರ್. ಕೌಶಲ್ಯ, ಹೆಚ್.ವಿ. ವಿರೂಪಾಕ್ಷ, ಬಿ.ಜೆ. ಅಭಿಷೇಕ್, ಶ್ರೀಮತಿ ಲತಾ ಹಾಲೇಶ್, ಡಾ. ಎಂ. ಸೋಮಶೇಖರಪ್ಪ, ಎಂ.ಎಸ್. ಸುಮಂತ್ ಅವರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ-ನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್. ರಮೇಶ್ ಅವರು ಮಹೇಶ್ವರಪ್ಪ ಅವರ ಆಯ್ಕೆಯನ್ನು ಘೋಷಿಸಿದರು.