ಕೃಷ್ಣ ನಿಧನಕ್ಕೆ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಸಂತಾಪ

ಕೃಷ್ಣ ನಿಧನಕ್ಕೆ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಸಂತಾಪ

ಹರಿಹರ, ಡಿ. 10 – ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದ ರಾಜ್ಯವು ಒಬ್ಬ ದಕ್ಷತೆ ಮತ್ತು ಮುತ್ಸದ್ಧಿ ರಾಜಕೀಯ ವ್ಯಕ್ತಿ ಯನ್ನು ಕಳೆದುಕೊಂಡಂತಾಗಿದೆ ಎಂದು ನಗರದ ನೂರ ಎಂಟು ಲಿಂಗೇಶ್ವರ ದೇವಸ್ಥಾನದ ಶರಣ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸೊಲ್ಲಾಪುರ ಹೇಳಿದರು.

ಕೃಷ್ಣ ತಮ್ಮ ಆರು ದಶಕಗಳ ರಾಜಕೀಯ ಜೀವನದಲ್ಲಿ ಎಲ್ಲರೊಡನೆ ಒಳ್ಳೆಯ ಒಡನಾಟ ಹೊಂದಿದ್ದರು. ಬಹಳ ಸರಳ ಸಜ್ಜನಿಕೆಯ ಮತ್ತು ಶಿಸ್ತು ಬದ್ಧ ವ್ಯಕ್ತಿಯಾಗಿದ್ದ ಅವರು ದೂರ ದೃಷ್ಟಿಯುಳ್ಳ ಸಮರ್ಥ ಆಡಳಿತಗಾರಾಗಿದ್ದರು. ಕಾವೇರಿ ಹಾಗೂ ಡಾ. ರಾಜಕುಮಾರ ರವರ ಸಮಸ್ಯೆಯನ್ನು ರಾಜ್ಯದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಗೆಹರಿಸುವಲ್ಲಿ ಬಹಳ ಜಾಣ್ಮೆಯ ಹೆಜ್ಜೆಗಳನ್ನು ಹಾಕಿದ್ದರು.  ಅಂತ ಮಹಾನ್ ಚೇತನಕ್ಕೆ ಭಗವಂತನನು ಶಾಂತಿ ನೀಡಲಿ ಎಂದು ಹೇಳಿದರು.

error: Content is protected !!