ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಗೋಪಾಳಿ ಮಮತ

ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಗೋಪಾಳಿ ಮಮತ

ಹರಪನಹಳ್ಳಿ, ಡಿ.9- ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಗೋಪಾಳಿ ಮಮತ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು  ತಿಳಿಸಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೋಪಾಳಿ ಮಮತ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಸ್. ರತ್ನಮ್ಮ ಸ್ಪರ್ಧಿಸಿದ್ದರು. ಒಟ್ಟು 18 ಸದಸ್ಯರುಗಳಲ್ಲಿ ಬಿಜೆಪಿಯ ಅಭ್ಯರ್ಥಿಗೆ 8 ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗೆ 7 ಮತಗಳನ್ನು ಪಡೆದುಕೊಂಡರು.

3 ಮತಗಳು ನಿಷ್ಕ್ರೀಯವಾದ ಕಾರಣ ಬಿಜೆಪಿ ಬೆಂಬಲಿತ ಅಭ್ಯರ್ಥಿ  1 ಮತಗಳ ಅಂತರದಲ್ಲಿ ರೋಚಕ ಗೆಲುವಿನ ನಗೆ ಬೀರಿದರು.

ಸದಸ್ಯರುಗಳಾದ ಹಾಲಮ್ಮ ಎಸ್, ಶಂಕರಗೌಡ ಎಚ್, ಅಂಜಿನಮ್ಮ ಯು, ಪಿ ಮಂಜುನಾಥ, ಎಂ. ಸಿದ್ದಲಿಂಗಪ್ಪ, ರೇವಣಸಿದ್ದಪ್ಪ, ಟಿ. ಮುನೇಗೌಡ, ಟಿ. ಶೃತಿ, ಕೆ. ನೀಲಮ್ಮ. ಪ್ರಮುಖರಾದ ಎಸ್. ಎಚ್. ಬುಳ್ಳನಗೌಡ, ಯು.ಕೋಟೆಪ್ಪ, ಕೆ. ಬಸವರಾಜ, ಗಿರಿಯಪ್ಳ ಮಂಜುನಾಥ,
ಹೆಚ್. ಶಂಕರಗೌಡ, ಎಂ.ಪಿ. ಹಾಲೇಶ್, ಬಿಜೆಪಿ ಬಸವರಾಜ, ಕೆ.ಜಿ. ಕೊಟ್ರೇಶ್  ಮತ್ತಿತರರು ಇದ್ದರು.

error: Content is protected !!