ಬೆಳ್ಳೂಡಿ ಮಠದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಬೆಳ್ಳೂಡಿ ಮಠದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಮಲೇಬೆನ್ನೂರು, ಡಿ.9- ಕಾಗಿನೆಲೆ ಕನಕ ಗುರು ಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವವು ಸೋಮವಾರ ರಾತ್ರಿ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರು ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಮೂರ್ತಿಗೆ ವಿಶೇಷ ಪೂಜೆ,  ಫಳಾರ ನೆರವೇರಿಸಿದ ನಂತರ ದೀಪ ಬೆಳಗಿಸಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ತಿಕೋತ್ಸವದ ಅಂಗವಾಗಿ ಇಡೀ ಮಠ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿತ್ತು. ಪಟಾಕಿ ಸಿಡಿತ ಭಕ್ತರ ಗಮನ ಸೆಳೆಯಿತು. ಡೊಳ್ಳು ಕುಣಿತ ಕಾರ್ತಿಕೋತ್ಸವಕ್ಕೆ ಮೆರಗು ತಂದಿತು.

ಮಾಜಿ ಸಚಿವ ಆರ್‌. ಶಂಕರ್‌, ಕಾಂಗ್ರೆಸ್‌ ಮುಖಂಡ ನಂದಿಗಾವಿ ಶ್ರೀನಿವಾಸ್‌, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಮಹಾನಗರಪಾಲಿಕೆ ಸದಸ್ಯ ಜೆ.ಎನ್‌. ಶ್ರೀನಿವಾಸ್‌, ಬೆಳ್ಳೂಡಿ ಗ್ರಾ.ಪಂ. ಅಧ್ಯಕ್ಷ ಉಮೇಶ್‌, ತಾ.ಪಂ. ಮಾಜಿ ಅಧ್ಯಕ್ಷ ಎಸ್‌.ಜಿ. ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ಕೆ. ರೇವಣಸಿದ್ದಪ್ಪ, ಕರೇಕಟ್ಟೆ ಲೋಕೇಶ್‌, ಸಿಪಿಐ ಸುರೇಶ್‌ ಸಗರಿ, ಪಿಎಸ್‌ಐ ರವಿಕುಮಾರ್‌, ಕೆ.ಪಿ. ಗಂಗಾಧರ್‌ ಡಿ.ಕೆ. ಸಿದ್ದನಗೌಡ, ಎಳೆಹೊಳೆ ಕುಮಾರ್‌, ಪಿ.ಹೆಚ್‌.ಶಿವಕುಮಾರ್‌, ಮಲ್ಲಿಕಾರ್ಜುನ್‌ ಪೂಜಾರ್‌,
ಹೆಚ್‌.ಕೆ. ಕನ್ನಪ್ಪ ಸೇರಿದಂತೆ, ಎಸ್‌.ಎಂ. ಮಂಜುನಾಥ್‌, ಮಲ್ಲೇಶ್‌ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!