ಹರಿಹರದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷಾ ವಸ್ತುಗಳ ವಿತರಣೆ

ಹರಿಹರದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷಾ ವಸ್ತುಗಳ ವಿತರಣೆ

ಹರಿಹರ, ಡಿ. 9 – ನಗರದ ಪೌರ ಕಾರ್ಮಿಕರಿಗೆ ಸುರಕ್ಷಾ ವಸ್ತುಗಳನ್ನು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಸದಸ್ಯ ಪಿ.ಎನ್. ವಿರುಪಾಕ್ಷ, ನಾಗರತ್ನ, ಅಬ್ದುಲ್ ಅಲಿಂ ವಿತರಣೆ ಮಾಡಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೋರೆದು ನಗರದ ಸ್ವಚ್ಚತೆ ಕೆಲಸವನ್ನು ಮಾಡುತ್ತಾರೆ.

 ಅವರಿಗೆ ಯಾವುದೇ ರೀತಿಯ ತೊಂದರೆ ಬರದಂತೆ ರಕ್ಷಣೆ ಮಾಡವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆದ್ದರಿಂದ ಪೌರ ಕಾರ್ಮಿಕ ಸ್ಥಿತಿಗತಿಗಳನ್ನು ಅರಿತು 24.10 ಹಾಗೂ 7.25 ಯೋಜನೆ ಅಡಿಯಲ್ಲಿ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗಿತ್ತು. ಅದರಲ್ಲಿ  ಸುಮಾರು 18 ಪೌರ ಕಾರ್ಮಿಕರಿಗೆ ಕೊರತೆ ಬಿದ್ದ ಪರಿಣಾಮ ಪೂನಹ 3 ಲಕ್ಷ ರೂಪಾಯಿ ವೆಚ್ಚವನ್ನು ಬಿಡುಗಡೆ ಮಾಡಿಸಿಕೊಂಡು ಒಟ್ಟು 11 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ, ಮಾಸ್ಕ್,ಹ್ಯಾಂಡ್ ಬ್ಲೂಸ್‌, ಹೆಲ್ಮೆಟ್ ವಿತರಣೆ ಮಾಡಲಾಗಿರುತ್ತದೆ. ಇದನ್ನು ಪಡೆದುಕೊಂಡ ಕಾರ್ಮಿಕರು ಪಡೆದ ನಂತರ ಮನೆಯಲ್ಲಿ ಇಟ್ಟು ಕೆಲಸವನ್ನು ಮಾಡುವುದನ್ನು ಬಿಟ್ಟು ಪ್ರತಿನಿತ್ಯ ಬಳಕೆ ಮಾಡುವಂತೆ ಹೇಳಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪಿ.ಎನ್. ವಿರುಪಾಕ್ಷಪ್ಪ, ನಾಗರತ್ನ, ಅಬ್ದುಲ್ ಅಲಿಂ, ಮುಖಂಡ ಮಾರುತಿ ಬೇಡರ್, ಯೋಜನೆ ಅಧಿಕಾರಿ ಜಗದೀಶ್, ಪೌರ ಕಾರ್ಮಿಕರು, ಇತರರು ಹಾಜರಿದ್ದರು. 

error: Content is protected !!