ಶೋಷಿತರ ಅಂತರಂಗದ ನುಡಿಗಳೇ ಶರಣ ಸಾಹಿತ್ಯ

ಶೋಷಿತರ ಅಂತರಂಗದ ನುಡಿಗಳೇ ಶರಣ ಸಾಹಿತ್ಯ

ಶರಣ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ

ದಾವಣಗೆರೆ, ಡಿ.9- ಬಂಡವಾಳ ಶಾಹಿಗಳ ಸಾಮ್ರಾಜ್ಯದಿಂದ ದೂರು ಇದ್ದಂತಹ ದಲಿತ, ಶೋಷಿತ ವ್ಯಕ್ತಿಗಳು ತಮ್ಮ ಅಂತರಂಗದ ಅರಿವಿನ ಮೂಲಕ ತಾಯಿ ನುಡಿಯ ಭಾಷೆಯಿಂದ ಹೊರ ಹಾಕಿದೆ ನುಡಿಗಳೇ ಶರಣ ಸಾಹಿತ್ಯ. ಜನಸಾಮಾನ್ಯರ ನೋವು, ನಲಿವುಗಳಿಗೆ, ದುಡಿಯುವ ವರ್ಗಗಳ ಧ್ವನಿಯಾಗಿ ಅವ ಅಪೇಕ್ಷೆ, ಅಗತ್ಯತೆಗಳ ದೃಢ ನಿರ್ಧಾರವನ್ನು ಶರಣ ಸಾಹಿತ್ಯ ಪರಿಷತ್ ಒದಗಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ ಹೇಳಿದರು.

ನಗರದ ಧರ್ಮಪ್ರಕಾಶ ಜಾಲಿಮರದ ವಿರೂಪಾಕ್ಷಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಶರಣ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು’ ಕುರಿತು ಮಾತನಾಡಿದರು.

ಶರಣ ಸಾಹಿತ್ಯವನ್ನು ಯಾರು ಓದಿ ಅಧ್ಯಯನ ನಡೆಸಿ, ಅವಲೋಕನ ಮಾಡಿ, ಆ ನುಡಿಯನ್ನು ತಮ್ಮ ನಡೆಯಲ್ಲಿ ಅಳವಡಿಸಿಕೊಳ್ಳುತ್ತಾರೋ ಆ ವ್ಯಕ್ತಿ ಮೃಗತ್ವದಿಂದ ಮನುಷ್ಯತ್ವ ಮತ್ತು ದೈವತ್ವದ ಕಡೆಗೆ ಕೊಂಡೊಯ್ಯುವ ಶಕ್ತಿಯೇ ಶರಣ ಸಾಹಿತ್ಯದ ಮೌಲ್ಯ ಎಂದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಅವರು ಅಧ್ಯಕ್ಷತೆ ವಹಿಸಿದ್ದರು. ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ ಅವರು, ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಪ್ರತಿ ದಿನ ವಚನಗಳನ್ನು ಅಭ್ಯಾಸ ಮಾಡಬೇಕೆಂದರು.

ಶರಣ ತತ್ವ ಪ್ರತಿಪಾದಕ ಶಿವಕುಮಾರ ಚಿತ್ರಿಕಿ ವಚನ ಗಾಯನದ ಮೂಲಕ ಸಭಿಕರನ್ನು ರಂಜಿಸಿದರು. ಲಿಂ. ಗೌರಮ್ಮ ಮತ್ತು ವೀರಭದ್ರಯ್ಯ ಹಂಜಗಿಮಠ ದತ್ತಿಯ ಕುಟುಂಬ ಶಾಂಭವಿಯವರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ, ಉಪಾಧ್ಯಕ್ಷ ಬುಳ್ಳಾಪುರದ ಮಲ್ಲಿಕಾರ್ಜುನಪ್ಪ, ಕೋಶಾಧಿಕಾರಿ ಶೈಲಜಾ ಪಾಲಾಕ್ಷಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಎನ್.ಎಸ್. ರಾಜು, ಗೌರವ ಸಲಹೆಗಾರ ಆರ್. ಯೋಗೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಕಾರ್ಯದರ್ಶಿ ಶ್ರೀಕುಮಾರ ಆನೆಕೊಂಡ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಜಿ.ಲೀಲಾವತಿ ಶೇಖರಪ್ಪ ವಂದಿಸಿದರು. ಶಿಕ್ಷಕ ಪಂಪಾಪತಿ ನಿರೂಪಿಸಿದರು.

error: Content is protected !!