ಹೂ ರಾಶಿಯೊಂದಿಗೆ ಕಂಗೊಳಿಸಿದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ

ಹೂ ರಾಶಿಯೊಂದಿಗೆ ಕಂಗೊಳಿಸಿದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ

ಕೊಟ್ಟೂರು, ಡಿ.9- ಭಕ್ತರ ಆರಾಧ್ಯದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹಿರೇಮಠವನ್ನು ಕಾರ್ತಿಕೋತ್ಸವದ ಮುನ್ನಾ ದಿನ ಸೋಮವಾರ ನಿಮಿತ್ತ್ಯ ಭಕ್ತರಾದ ಪಟ್ಟಣದ ಸಹೋದರ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಅವರು ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಹೂವಿನ ಮಾಲೆಗಳೊಂದಿಗೆ ಅಲಂಕರಿಸಿ ಭಕ್ತ ಸಮೂಹ ಆಕರ್ಷಿಸುವ ಮೂಲಕ  ಶ್ರೀ ಸ್ವಾಮಿಗೆ ತಮ್ಮ ಸೇವೆ ಸಲ್ಲಿಸಿದರು.  

ಕಳೆದ 8 ವರ್ಷಗಳಿಂದ ಪ್ರತಿ ಕಾರ್ತಿಕ ಮಾಸದಲ್ಲಿ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಭಕ್ತ ಸಹೋದರರಾದ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಈ ಬಾರಿ 9ನೇ ವರ್ಷದಲ್ಲೂ ಭರ್ಜರಿ ಹೂವುಗಳ ರಾಶಿಯೊಂದಿಗೆ ದೇವಸ್ಥಾನವನ್ನು ಶೃಂಗರಿಸುವ ಸೇವೆಗೈದರು.

ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸಲೆಂದೇ ಬೆಂಗಳೂರಿ ನಿಂದ ವಿಶೇಷವಾಗಿ 9 ವಿಧದ ಹೂಗಳಾದ ಬಿಡಿ ಸೇವಂತಿಗೆ, ಪೂರ್ಣಿಮಾ, ಕೆಂಪು, ಕಾವೇರಿ, ಕೆಂಪು ಕಾವೇರಿ, ಹಸಿರು ಸೇವಂತಿಗೆ, ಬಟನ್, ಕನಕಾಂಬರಿ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವುಗಳನ್ನು ಸುಮಾರು 1.50 ಲಕ್ಷ ವ್ಯಯಿಸಿದ್ದರು.

ಈ ಸೇವೆಯನ್ನು ಸಲ್ಲಿಸಲೆಂದೇ ಭಾನುವಾರ ಇಡೀ ರಾತ್ರಿ  ದೇವಸ್ಥಾನದ ಬಳಿಯ ಯುವಕರು, ಭಕ್ತರು ಮತ್ತಿತರರೊಡಗೂಡಿ ಶೃಂಗರಿಸುವ ಕಾರ್ಯ ಕೈಗೊಂಡರು. ಸೋಮವಾರದ ಬೆಳಗಿನ ಜಾವ ಐದು ಗಂಟೆಯೊಳಗೆ ಹೂಗಳ ಅಲಂಕಾರದೊಂದಿಗೆ ಕೊಟ್ಟೂರೇಶ್ವರ ಸ್ವಾಮಿ ವಿಶೇಷವಾಗಿ ಕಂಗೊಳಿಸುತ್ತಿತ್ತು.

error: Content is protected !!