ಜೈನ್ ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ಡೇ

ಜೈನ್ ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ಡೇ

ದಾವಣಗೆರೆ, ಡಿ. 8- ಜೈನ್ ಇನ್‌ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಸಕ್ತ ಶೈಕ್ಷಣಿಕ ವರ್ಷದ ಗ್ರ್ಯಾಜುಯೇಷನ್ ಡೇ ಸಮಾರಂಭ ವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸ ಲಾಗಿತ್ತು. ಡಾ. ಎನ್. ಮಧುಕೇಶ್ವರ ಡೀನ್ ಆಕಾಡೆಮಿಕ್ಸ್ ಸ್ವಾಗತದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. 

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಸುರೇಶ್ ಹೆಚ್.ಜಂಗಮಶೆಟ್ಟಿ, ಸಂಜೀವ್ ಎಂ. ಬಾಗೇವಾಡಿ ಮಾತನಾಡಿ, 2024ರ ಬ್ಯಾಚ್ ಅನ್ನು ಉದ್ದೇಶಿಸಿ, ಪಾಲಕರು ಮತ್ತು ಅಧ್ಯಾಪಕರನ್ನು ಅಭಿನಂದಿಸಿ, ಕಲಿಕೆಯನ್ನು ನಿಲ್ಲಿಸಬೇಡಿ, ಕಲಿಯುವುದನ್ನು ಮುಂದುವರೆಸಿ ಮತ್ತು ಕೆಲಸ ಮಾಡುವ ಮನೋಭಾವ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳಿ. ದೇಶದ ಪ್ರಗತಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಬಹುಮುಖ್ಯವಾಗಿದೆ ಹಾಗು ನೀವು ಬೆಳೆಯುವುದರ ಜೊತೆಗೆ ಕಾಲೇಜು ಮತ್ತು ಪೋಷಕರಿಗೆ ಗೌರವ ತರುವ ನಾಗರಿಕರಾಗಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್,  ಕಾರ್ಯಕ್ರಮದ ಸಂಚಾಲಕ ಡಾ. ಸಂತೋಷ್ ಎಂ. ನೇಜಕರ್, ಸಂಯೋಜಕ ಡಾ. ನಂದೀಶ್ ಬಿ.ಎಂ. ಮತ್ತು ಡಾ. ಪಿ.ಎಸ್. ಪ್ರೀತಾ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!