ಹೊನ್ನಾಳಿ, ಡಿ. 6- ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಹಾ ಪೋಷಕರಾಗಿರುವ ಹೊನ್ನಾಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿಗೆ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಡಾ. ಎಂ.ಆರ್. ಲೋಕೇಶ್ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಕೆ.ಪಿ. ದೇವೇಂದ್ರಯ್ಯ, ಉಪಾಧ್ಯಕ್ಷರುಗಳಾಗಿ ಗೊಲ್ಲರಹಳ್ಳಿ ಮಂಜುನಾಥ್, ಶಾರದಾ ಕಣಗೊಟಗಿ, ಕಾರ್ಯದರ್ಶಿಗಳಾಗಿ ಪ್ರೊ. ಕೆ. ನಾಗೇಶ, ಕತ್ತಿಗೆ ನಾಗರಾಜ್ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಅರಕೆರೆ ಕೃಷ್ಣಪ್ಪ, ಗೌರವ ಸಲಹೆಗಾರರಾಗಿ ಯು.ಎನ್. ಸಂಗನಾಳಮಠ, ಪತ್ರಿಕಾ ಪ್ರತಿನಿಧಿಯಾಗಿ ಜಯಪ್ಪ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರುಗಳು : ಡಾ. ಉತ್ತಂಗಿ ಕೊಟ್ರೇಶ್, ಪ್ರೊ. ಜಿ.ಪಿ. ರಾಘವೇಂದ್ರ, ಗಾಯಕ ಕಡದಕಟ್ಟೆ ತಿಮ್ಮಪ್ಪ, ನಾಗರಾಜಪ್ಪ ಜೋಗಿಹಳ್ಳಿ, ಡಿ. ಶಿವರುದ್ರಪ್ಪ, ಬಿ.ವಿ. ಬಸವರಾಜಪ್ಪ, ಹರಾಳು ಮಹಾಬಲೇಶ್ವರ, ಎಲ್. ರೋಹಿತ್ ಕುಮಾರ್, ಪ್ರೊ. ಎಂ. ನಾಗರಾಜನಾಯಕ್, ಡಾ. ಟಿ.ಆರ್. ಕುಬೇರಪ್ಪ, ಎನ್.ಹೆಚ್. ಗೋವಿಂದಪ್ಪ, ಸತೀಶ್ ಎ. ಕತ್ತಿಗೆ, ಧನರಾಜಪ್ಪ, ಪ್ರೊ. ಬಿ.ತಿಪ್ಪೇಶ್, ಬಸವರಾಜಪ್ಪ, ದಿನೇಶ್ ಕಾಂಬಳಿ, ಜಗದೀಶ್ ಅವರುಗಳು ಆಯ್ಕೆಯಾಗಿದ್ದಾರೆ.
ತಾಲ್ಲೂಕು ಕದಳಿ ಮಹಿಳಾ ವೇದಿಕೆ : ಗೌರವಾಧ್ಯಕ್ಷರಾಗಿ ಶಾರದ ಕೊಣಗೊಟಗಿ, ಅಧ್ಯಕ್ಷರು ಡಾ. ಪ್ರತಿಮಾ ನಿಜಗುಣ ಶಿವಯೋಗಿ, ಉಪಾಧ್ಯಕ್ಷರುಗಳಾಗಿ ವೀಣಾ ಸುರೇಶ್, ಎಂ.ಎಸ್. ರಾಜೇಶ್ವರಿ, ಕಾರ್ಯದರ್ಶಿಯಾಗಿ ಸುಮ ರವಿಕುಮಾರ್, ಕೋಶಾಧಿಕಾರಿಯಾಗಿ ಶಿಲ್ಪ ರಾಜುಗೌಡ್ರು, ಗೌರವ ಸಲಹೆಗಾರರಾಗಿ ಸುನಂದ ಎ.ಜಿ. ಸುನಂದ, ಸವಿತಾ ವೀರೇಶ್ ಆಯ್ಕೆಯಾಗಿದ್ದಾರೆ.
ಸದಸ್ಯರುಗಳು : ಆರ್.ಹೆಚ್. ಗೀತಾ, ಹಾಲಮ್ಮ ಬಸವರಾಜ್, ಆಶಾ, ಪಾರ್ವತಿ ವೀರೇಶ್, ಕೆ.ಎಂ. ಅಶ್ವಿನಿ, ಎಂ.ಬಿ. ವನಜಾಕ್ಷಿ, ಲತಾ ಸಿದ್ದಪ್ಪ, ಗಿರಿಜಮ್ಮ ಮಂಜಾಚಾರ್, ಶಿಲ್ಪ ಪಾಲಾಕ್ಷಪ್ಪ, ಕೆ.ಹೆಚ್. ರಶ್ಮಿ, ಚಂದ್ರಕಲಾ, ಸುಧಾ ಶಿವು.