ದಾವಣಗೆರೆ, ಡಿ.6- ಕುಂದುವಾಡ ಕೆರೆ ವಾಯು ವಿಹಾರ ಬಳಗದ ವತಿಯಿಂದ ಹೊಸ ವರ್ಷದ ಪ್ರಯುಕ್ತ ದಾವಣಗೆರೆಯಿಂದ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.
ನಾಡಿದ್ದು ದಿನಾಂಕ 8 ರ ಭಾನುವಾರ ಬೆಳಿಗ್ಗೆ 5.30ಕ್ಕೆ ನಗರದ ಬಿ.ಎಸ್.ಎನ್.ಎಲ್. ಸರ್ಕಲ್‌ನಿಂದ ಪ್ರಾರಂಭವಾಗುತ್ತದೆ. ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚಾಲನೆ ನೀಡುವರು. ಕಾಲ್ನಡಿಗೆ ಜಾಥಾ ಹರಿಹರೇಶ್ವರ ದೇವಸ್ಥಾನ ತಲುಪಿದ ಬಳಿಕ ಅಲ್ಲಿ ಯೋಗಾ ಮತ್ತು ಧ್ಯಾನ ಶಿಬಿರ ನಡೆಯಲಿದೆ.
ದೇವಸ್ಥಾನ ಆವರಣದಿಂದ ದಾವಣಗೆರೆಗೆ ಬರುವವರಿಗೆ ನಗರದ ಸಪ್ತಗಿರಿ ವಿದ್ಯಾಸಂಸ್ಥೆ 3, ಸೆಂಟ್‌ಜಾನ್ಸ್ ವಿದ್ಯಾಸಂಸ್ಥೆ 2, ಯುರೋಕಿಡ್ಸ್ ವಿದ್ಯಾಸಂಸ್ಥೆ 2 ಹಾಗೂ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ವತಿಯಿಂದ 2 ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಭಾಗವಹಿಸಿ ನಮ್ಮ ನಡೆ ಆರೋಗ್ಯದ ಕಡೆ ಎಂಬ ಕಾಲ್ನಡಿಗೆಗೆ ಸಹಕರಿಸಬೇಕೆಂದು ಕುಂದುವಾಡ ಕೆರೆ ವಾಯು ವಿಹಾರ ಬಳಗದ ಅಧ್ಯಕ್ಷ ಜೆ. ಈಶ್ವರ್‌ಸಿಂಗ್ ಕವಿತಾಳ್ ಮನವಿ ಮಾಡಿದ್ದಾರೆ.