31 ರಿಂದ ನಗರದಲ್ಲಿ ಪ್ರವಚನ

31 ರಿಂದ ನಗರದಲ್ಲಿ ಪ್ರವಚನ

ದಾವಣಗೆರೆ, ಡಿ. 6- ಶ್ರೀ ಶಿವಯೋಗೀಶ್ವರ ಭಜನಾ ಸಂಘದ ವತಿಯಿಂದ ಇದೇ ದಿನಾಂಕ 31 ರಿಂದ ಒಂದು ತಿಂಗಳ ಪರ್ಯಂತ ಪುರಾಣ ಪ್ರವಚನವು ಪ್ರತಿದಿನ ಸಂಜೆ 6.30 ರಿಂದ ರಾತ್ರಿ 8 ರವರೆಗೆ ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಲಿಂ. ಪಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರೂ, ಹೆಸರಾಂತ ಪ್ರವಚನಕಾರರೂ ಆದ ಅಬ್ಬಿಗೆರೆ ಮಂಜುನಾಥ ಶಾಸ್ತ್ರಿ ಅವರು ಕಲ್ಬುರ್ಗಿ ಶರಣ ಬಸವೇಶ್ವರರ ಪುರಾಣ ನಡೆಸಿಕೊಡಲಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರಿಗೆ ತುಲಾಭಾರ ಸೇವೆಗಳು ಜರುಗಲಿವೆ ಎಂದು ಭಜನಾ ಸಂಘದ ಸಂಚಾಲಕರೂ, ಪುರಾಣ ಪ್ರವಚನದ ಸಂಚಾಲಕರೂ ಆಗಿರುವ ಅಜ್ಜಂಪುರ ಶೆಟ್ರು ಮೃತ್ಯುಂಜಯ ತಿಳಿಸಿದ್ದಾರೆ.

ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರು 48 ವರ್ಷಗಳ ಹಿಂದೆ ಆರಂಭಿಸಿ ನಡೆಸಿಕೊಂಡು ಬರುತ್ತಿರುವ ಈ ಪುರಾಣ ಪ್ರವಚನವು 49ನೇ ವರ್ಷವಾಗಿರುವ ಈ ಬಾರಿಯೂ ಎಂದಿನಂತೆ ನಡೆಯಲಿದೆ. ಸದ್ಭಕ್ತರು ಪ್ರವಚನದಲ್ಲಿ ಭಾಗವಹಿಸುವುದರ ಮೂಲಕ ಯಶಸ್ವಿಗೊಳಿಸುವಂತೆ ಬಸವರಾಜಪ್ಪ ಮತ್ತು ವೈ. ರುದ್ರೇಶ್ ಕೋರಿದ್ದಾರೆ. 

error: Content is protected !!