ಹೊನ್ನಾಳಿ : ಇಂದು ಬೀರಪ್ಪ ದೇವರ ಪವಾಡ ಕಾರ್ಯಕ್ರಮ

ಹೊನ್ನಾಳಿ : ಇಂದು ಬೀರಪ್ಪ ದೇವರ ಪವಾಡ ಕಾರ್ಯಕ್ರಮ

ನಾಡಿದ್ದು ರಾಜ್ಯಮಟ್ಟದ ಬಯಲು ಖಾಟಾ ಜಂಗೀ ಕುಸ್ತಿ ಪಂದ್ಯಾವಳಿಗಳು

ಹೊನ್ನಾಳಿ, ಡಿ.8- ಪಟ್ಟಣದ ದೊಡ್ಡಕೇರಿಯಲ್ಲಿ ಬೀರಲಿಂಗೇಶ್ವರ ಕಾರ್ತಿಕೋತ್ಸವ ನಿಮಿತ್ತ ನಾಳೆ ದಿನಾಂಕ 9ರಿಂದ 13ರ ವರೆಗೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಲಿವೆ ಎಂದು ಯಜಮಾನ್ ಎಚ್.ಬಿ. ಗಿಡ್ಡಪ್ಪ ಹಾಗೂ ತೆಂಗಿನಮರದ ಮಾದಪ್ಪ ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಬೀರಪ್ಪ ದೇವರ ಪವಾಡ ಕಾರ್ಯಕ್ರಮ ನಡೆಯಲಿದೆ ಎಂದರು.

ನಾಡಿದ್ದು ದಿನಾಂಕ 10ರ ಬೆಳಗ್ಗೆ ಬೀರಪ್ಪ ದೇವರ ಮುಳ್ಳುಗದ್ದುಗೆ ಉತ್ಸವ ಹಾಗೂ ಮೊಳೆ ಪಲ್ಲಕ್ಕಿ ಉತ್ಸವ ತುಂಗಭದ್ರಾ ನದಿಯಿಂದ  ಹೊರಟು ದುರ್ಗಮ್ಮ ದೇವಸ್ಥಾನದ ಆವರಣ ಸೇರಲಿದೆ. ನಂತರ ಕೆಂಡ ಹಾಯುವ ಕಾರ್ಯಕ್ರಮ ನಡೆದು ತದನಂತರ ದೇವರ ಮೆರವಣಿಗೆ ಜರುಗಲಿದೆ ಎಂದರು.

ಮಧ್ಯಾಹ್ನ 1ಕ್ಕೆ ದೊಡ್ಡಕೇರಿಯ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯಮಟ್ಟದ ಬಯಲು ಖಾಟಾ ಜಂಗೀ ಕುಸ್ತಿ : ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಲಭಾಗದ ಅಖಾಡದಲ್ಲಿ ಇದೇ ದಿನಾಂಕ 11ರಿಂದ 13ರ ವರೆಗೆ ರಾಜ್ಯ ಮಟ್ಟದ ಬಯಲು ಖಾಟಾ ಜಂಗೀ ಕುಸ್ತಿ ಪಂದ್ಯಾವಳಿ ಜರುಗಲಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪೈಲ್ವಾನರು ಕುಸ್ತಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಉತ್ತಮ ಕುಸ್ತಿ ಪಟುಗಳಿಗೆ ಬೆಳ್ಳಿ ಗದೆ, 15ರಿಂದ 25 ಸಾವಿರದ ವರೆಗೆ ನಗದು ಹಾಗೂ ರಾಜ್ಯಮಟ್ಟದ ಕುಸ್ತಿ ಪೈಲ್ವಾನರಿಗೆ ಇನ್ನೂ ಹೆಚ್ಚಿನ ಮೊತ್ತ  ನಿಗದಿ ಪಡಿಸಲಾಗಿದೆ ಎಂದರು.

1ನೇ ದಿನದ ಕುಸ್ತಿ ಪಂದ್ಯಾವಳಿಗಳು ಎಚ್.ಬಿ. ಗಿಡ್ಡಪ್ಪ ಅಧ್ಯಕ್ಷತೆಯಲ್ಲಿ, 2ನೇ ದಿನದ ಕುಸ್ತಿ ಪಂದ್ಯಾವಳಿಗಳು ತೆಂಗಿನಮರದ ಮಾದಪ್ಪ ಅಧ್ಯಕ್ಷತೆಯಲ್ಲಿ, 3ನೇ ದಿನದ ಕುಸ್ತಿ ಪಂದ್ಯಾವಳಿಗಳು ಬೀರಲಿಂಗೇಶ್ವರ ದೇವರ ಟ್ರಸ್ಟ್ ಕಮಿಟಿವತಿಯಿಂದ ಜರುಗಲಿವೆ ಎಂದರು.

3 ದಿನಗಳ ಕುಸ್ತಿ ಪಂದ್ಯಾವಳಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ವೇಳೆ ಅಣ್ಣಪ್ಪ ಸ್ವಾಮಿ, ಪ್ರಭುಸ್ವಾಮಿ, ಬುದ್ಧಿವಂತ ಪರಸಣ್ಣಾರ ನರಸಿಂಹಪ್ಪ, ಗೌಡ್ರು ನರಸಪ್ಪ, ಮುಖಂಡರಾದ ಹೆಚ್.ಡಿ ವಿಜೇಂದ್ರಪ್ಪ, ಬಿಸಾಟಿ ನಾಗರಾಜಪ್ಪ, ಇಟ್ಟಿಗೆ ಬಸಣ್ಣ, ಬೂದ್ಯಪ್ಪ, ಪೈಲ್ವಾನ್‌ ಸಿದ್ದಪ್ಪ, ಕಾಳಿಂಗಪ್ಪ, ಸತ್ತಿಗೆ ಮಂಜಪ್ಪ, ಸುರೇಶ್, ಕುಸ್ತಿ ಕಮಿಟಿ ಅಧ್ಯಕ್ಷ ಹೆಚ್.ಬಿ ಅಣ್ಣಪ್ಪ, ಗೌರವಾಧ್ಯಕ್ಷ ಎನ್.ಕೆ ಆಂಜನೇಯ ಇದ್ದರು.

error: Content is protected !!