ಮಲೇಷ್ಯಾದಲ್ಲಿ ಡಾ.ಪ್ರಸನ್ನಕುಮಾರ ಉಪನ್ಯಾಸ

ಮಲೇಷ್ಯಾದಲ್ಲಿ  ಡಾ.ಪ್ರಸನ್ನಕುಮಾರ ಉಪನ್ಯಾಸ

ದಾವಣಗೆರೆ, ಡಿ. 5- ಮಲೇಷ್ಯಾದ ಮೊನಾಶ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿ ಸಿರುವ ಹವಾಮಾನ ಸ್ಥಿತಿಸ್ಥಾಪಕ ಮೂಲ ಸೌಲಭ್ಯ- 2024 ಕುರಿತು ನಾಡಿದ್ದು ದಿನಾಂಕ 7ರಿಂದ 10ರ ವರೆಗೆ ಏರ್ಪಡಿ ಸಿರುವ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಸಿ.ಪ್ರಸನ್ನಕುಮಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಜಾಗತಿಕ ಮಟ್ಟದ ವಿಚಾರ ಸಂಕಿರಣದಲ್ಲಿ 14 ರಾಷ್ಟ್ರಗಳ ಸಂಶೋಧಕರು ತಮ್ಮ ವಿದ್ವತ್ಪೂರ್ಣ ಪ್ರಬಂಧ ಮಂಡಿಸಲಿದ್ದಾರೆ. ಡಿ.9ರಂದು ನಿರ್ಮಾಣ ಪರಿವರ್ತನೆ ಕುರಿತು ಗೋಷ್ಠಿಯಲ್ಲಿ ಡಾ.ಪ್ರಸನ್ನಕುಮಾರ ಅವರು ‘ಪ್ರಿಡಿಕ್ಟಿವ್ ಮಷಿನ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ಫಪಾರ್ಮೆನ್ಸ್ ಅನಲೈಸಿಸ್ ಆಫ್ ದಿ ಅರ್ಥ್-ಏರ್ ಹೀಟ್ ಎಕ್ಸ್‌ಚೇಂಜರ್’ ಕುರಿತು ವಿಚಾರ ಮಂಡಿಸಲಿದ್ದಾರೆ.
ಡಾ. ಪ್ರಸನ್ನಕುಮಾರ ಅವರು ಇತ್ತೀಚೆಗೆ ಕರ್ನಾಟಕ ಸರ್ಕಾರವು ಯುವ ವಿಜ್ಞಾನಿಗಳಿಗೆ ಕೊಡಮಾಡಿದ ಸರ್ ಸಿ.ವಿ. ರಾಮನ್ ಪ್ರಶಸ್ತಿ ಪಡೆದಿದ್ದಾರೆ.

ವಿಚಾರ ಸಂಕಿರಣದಲ್ಲಿ ಭಾಗವಹಿಸಲು ತೆರಳಿದ ಡಾ. ಪ್ರಸನ್ನಕುಮಾರ ಅವರನ್ನು ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲಸಚಿವರಾದ ಪ್ರೊ. ಯು.ಎಸ್. ಮಹಾಬಲೇಶ್ವರ, ಪ್ರೊ.ರಮೇಶ್, ಡೀನ್‌ಗಳಾದ ಪ್ರೊ. ಆರ್.ಶಶಿಧರ, ಪ್ರೊ. ಕೆ.ವೆಂಕಟೇಶ, ಪ್ರೊ. ಸುಚಿತ್ರಾ ಅಭಿನಂದಿಸಿದರು.

error: Content is protected !!