ದಾವಣಗೆರೆ, ಡಿ.5- ದೇಶದಲ್ಲಿ ಅತಿ ದೊಡ್ಡ ಚಿನ್ನ ಮತ್ತು ವಜ್ರದ ರಿಟೇಲ್ ಜಾಲಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ದಾವಣಗೆರೆ ಶೋ ರೂಂ.ನಲ್ಲಿ ಇಂದಿನಿಂದ ಇದೇ ದಿನಾಂಕ 8 ರವರೆಗೆ `ಆರ್ಟಿಸ್ಟಿ ಶೋ’ ಆಯೋಜಿಸಿಲಾಗಿದೆ.
ಭೂಮಿಕಾ, ಅನುಷಾ, ಡಾ. ಅಧಿತಿ, ಡಾ. ರೇಣು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜ್ನಲ್ಲಿ ಶೇ. 25 ರ ತನಕ ಹಾಗೂ ವಜ್ರದ ಮೇಲೆ ಶೇ. 25 ರ ತನಕ ರಿಯಾಯತಿ ನೀಡಲಾಯಿತು. ಜಮ್ಸ್ಟೋನ್ ಜ್ಯುವೆಲರಿಯ ಪ್ಲಾಟ್ ಮೇಕಿಂಗ್ ಚಾರ್ಜ್ನಲ್ಲಿ ಶೇ. 25 ರ ತನಕ ರಿಯಾಯತಿ ನೀಡಲಾಯಿತು. ಈ ವಿಶೇಷ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳ ವ್ಯಾಪಕ ಶ್ರೇಣಿಯೊಂದಿಗೆ ಕರಕುಶಲ ಆಭರಣಗಳ ಕಲಾತ್ಮಕ ಕೌಶಲ್ಯವನ್ನು ಪ್ರದರ್ಶಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿರ್ದೇಶಕ ಬಾಸಿಲ್ ರಾಜನ್, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಲಬಾರ್ ಗ್ರೂಪ್ನ ಅಧ್ಯಕ್ಷ ಎಂ.ಪಿ. ಅಹ್ಮದ್ ಮಾತನಾಡಿ, ದಾವಣಗೆರೆ ಶೋರೂಂನಲ್ಲಿ ಆರ್ಟಿಸ್ಟಿ ಶೋ ಅನ್ನು ಆರಂಭ ಮಾಡಲು ಮತ್ತು ನಮ್ಮ ಆಭರಣದ ಕರಕುಶಲತೆಯ ಶ್ರೇಷ್ಠತೆಯನ್ನು ಆಚರಿಸುವ ಸೊಗಸಾದ ವಿನ್ಯಾಸಗಳನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ ಎಂದರು.