ಡಾ. ಬಿ.ಆರ್.ಅಂಬೇಡ್ಕರ್ ಜ್ಯೋತಿ ಯಾತ್ರೆಗೆ ಅದ್ಧೂರಿ ಸ್ವಾಗತ

ಡಾ. ಬಿ.ಆರ್.ಅಂಬೇಡ್ಕರ್ ಜ್ಯೋತಿ ಯಾತ್ರೆಗೆ ಅದ್ಧೂರಿ ಸ್ವಾಗತ

ದಾವಣಗೆರೆ, ಡಿ. 5-  ಕರ್ನಾಟಕ ದಲಿತ ಸಂಘಟ ನೆಗಳ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 67 ನೇ ಮಹಾಪರಿ ನಿರ್ವಾಣದ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿ ಯಾತ್ರೆ ಇಂದು ರಾತ್ರಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಿಂದ ಆರಂಭಗೊಂಡ ಅಂಬೇಡ್ಕರ್ ಜ್ಯೋತಿ ಯಾತ್ರೆ ನಾಳೆ ಮುಂಬೈನ ದಾದರ್‌ನ ಕಡಲ ತೀರ ಶಿವಾಜಿ ಪಾರ್ಕ್ ಚೈತನ್ಯ ಭೂಮಿಗೆ ತಲುಪಲಿದೆ.

ಅಂಬೇಡ್ಕರ್ ಸರ್ಕಲ್ ಬಳಿ ಡೊಳ್ಳು ಮತ್ತು ನಂದಿಕೋಲು ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಬಸವರಾಜ್ ಜ್ಯೋತಿ ಯಾತ್ರೆಗೆ ಶುಭ ಕೋರಿ ಮಾತನಾಡಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನರಸಿಂಹಪ್ಪ ಕುದೂರು, ರವಿಕುಮಾರ್, ಬಾಲಪ್ಪ, ಟಿ. ಹನುಮಂತಪ್ಪ, ಸೋಮಲಾಪುರದ ಹನುಮಂತಪ್ಪ, ಆವರಗೆರೆ ಚಂದ್ರು, ಐರಣಿ ಚಂದ್ರು, ಕೆ.
ಬಾನಪ್ಪ, ಹೆಗ್ಗೆರೆ ರಂಗಪ್ಪ, ಬಿ. ಗುರುಮೂರ್ತಿ, ಬಿ.ಆರ್. ಮಂಜುನಾಥ್, ವಿಜಯ ಪುಟಗನಾಳ್, ಸಂತೋಷ್ ಕುಮಾರ್ ಹಾವೇರಿ, ಮಲ್ಲೇಶ್ ರಾಣೇಬೆನ್ನೂರು, ಮಂಜುನಾಥ್ ಕೊಪ್ಪಳ ಹರಿಹರ ಮತ್ತಿತರರು ಭಾಗವಹಿಸಿದ್ದರು.

error: Content is protected !!