ದಾವಣಗೆರೆ, ಡಿ. 5- ಎಲ್‌ಪಿಜಿ ಗ್ಯಾಸ್ ಬಳಕೆಯ ಸುರಕ್ಷಿತ ಕ್ರಮ, ತೈಲ ಮಾರುಕಟ್ಟೆ ಕಂಪನಿಗಳಿಂದ ಪಾಕಶಾಲೆಯ ಕೌಶಲ್ಯಗಳನ್ನು ಆಚರಿಸುವಾಗ ಎಲ್‌ಪಿಜಿ ನಿರ್ವಹಣೆ ಹಾಗೂ ಅಡುಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ನಗರದ ಜಿನಿಸಿಸ್ ರಿಟ್ರೀಟ್‌ನಲ್ಲಿ ಈಚೆಗೆ ನಡೆಯಿತು.
ನಮ್ಮ ಅಡುಗೆ ನಮ್ಮ ಜವಾಬ್ದಾರಿ ಎಂಬ ಘೋಷ ವಾಕ್ಯದೊಂದಿಗೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುವುದರೊಂದಿಗೆ ಎಲ್‌ಪಿಜಿ ಗ್ರಾಹಕರಲ್ಲಿ ಎಲ್‌ಪಿಜಿ ಕುರಿತಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಯಶಸ್ಸು ಕಂಡಿತು. ಸ್ಪರ್ಧಾ ವಿಜೇತರಿಗೆ ಜಿಲ್ಲಾ ನೋಡಲ್ ಅಧಿಕಾರಿ ಭರತ್‌ಚಂದ್ರ ಪಂಚಲ ಬಹುಮಾನ, ಪ್ರಮಾಣ ಪತ್ರ ವಿತರಿಸಿದರು.
ಚೇತನ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ದರ್ಶನ್ ಸ್ವಾಗತಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಚಿಂದೋಡಿ ವೀರಶಂಕರ ವಂದಿಸಿದರು.