ದಾವಣಗೆರೆ, ಡಿ.4- ಬೆಂಗಳೂರಿನ ಬಿ.ಟಿ.ಎಂ. ಲೇಔಟ್‌ನ ಆರ್ಚಿಡ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಡಿಸೆಂಬರ್ 1 ರಂದು ನಡೆದ 8 ನೇ ರಾಜ್ಯ ಮಟ್ಟದ ಫೀಲ್ಡ್ ಇಂಡೋರ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಹೊರಟಿ ಕ್ರೀಡಾ ಅಕಾಡೆಮಿ ವಿದ್ಯಾರ್ಥಿಗಳು ಸ್ಪರ್ಧಿಸಿ, 4 ಬಂಗಾರದ ಪದಕಗಳು, 3 ಬೆಳ್ಳಿಯ ಪದಕಗಳು ಹಾಗೂ 2 ಕಂಚಿನ ಪದಕಗಳು ಗಳಿಸಿರುತ್ತಾರೆ.
ವೈಭವ್ ನಾಯ್ಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ : ದಾವಣಗೆರೆ ಸಹಕಾರ ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ್ ಇವರ ಪುತ್ರ ವೈಭವ್ ನಾಯ್ಕ್ ಅವರು ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾಗಿ ಲಕ್ನೋನಲ್ಲಿ ನಡೆಯುವ ರಾಷ್ಟ್ರಮಟ್ಟದ ಆರ್ಚರಿ ಸ್ಪರ್ಧೆಗೆ ಆಯ್ಕೆಯಾಗಿನೆ.
ಸ್ಪರ್ಧೆಯಲ್ಲಿ ಭಾಗವಹಿಸಿ, ಜಯ ಗಳಿಸಿದ ವಿಜೇತರನ್ನು ಅಭಿನಂದಿಸಲಾಯಿತು.