ರೈತರಿಗೆ ಹೆಚ್ಚಿನ ಅನುಕೂಲ ಮಾಡಿ : ಶಾಸಕ ಬಿ.ಪಿ ಹರೀಶ್‌

ರೈತರಿಗೆ ಹೆಚ್ಚಿನ ಅನುಕೂಲ ಮಾಡಿ : ಶಾಸಕ ಬಿ.ಪಿ ಹರೀಶ್‌

ಹರಿಹರ, ಡಿ.3- ನಗರದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಸೋಮವಾರ ರೈತ ಮುಖಂಡರ ಹಾಗೂ ಬಗರ್ ಹುಕ್ಕುಂ ಸದಸ್ಯರ ಸಭೆ ನಡೆಯಿತು.

ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸರ್ಕಾರದ ನಿಬಂಧನೆಗಳ ಅನ್ವಯದಂತೆ ಮತ್ತು ಕಾನೂನು ಉಲ್ಲಂಘನೆ ಆಗದ ರೀತಿಯಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ಇತ್ತೀಚೆಗೆ ತಂತ್ರಜ್ಞಾನ ವ್ಯವಸ್ಥೆ ಬಂದಾಗಿನಿಂದ ಸರ್ಕಾರ ಸಾಕಷ್ಟು ಮಾನದಂಡಗಳನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಏನೇ ಮಾಡಿದರು ಸರ್ಕಾರದ ಮಾನದಂಡದ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕಿದೆ. ಹಾಗಾಗಿ ರೈತರು ಸಹಕರಿಸಬೇಕು ಎಂದು ಹೇಳಿದರು.

ಈ ವೇಳೆ ಬಗರ್ ಹುಕ್ಕುಂ ಸಮಿತಿ ಸದಸ್ಯರಾದ ಚಂದ್ರಶೇಖರ್ ಹರಳಹಳ್ಳಿ, ಎಳೆಹೊಳೆ ಕರಿಬಸಪ್ಪ, ಸವಿತಾ ವಾಸನ, ವಿ.ಎ. ಆನಂದ್, ಸಮೀರ್, ಅಧಿಕಾರಿಗಳು ಹಾಗೂ ರೈತ ಮುಖಂಡರು ಇದ್ದರು.

error: Content is protected !!