ಮಲೇಬೆನ್ನೂರು, ಡಿ. 3 – ಇಲ್ಲಿನ ಜುಮ್ಮಾ ಮಸೀದಿಗೆ ನೂತನ ವಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ವತಾಜಮ್ ಪಾಷಾ ಅವರು ಶನಿವಾರ ಅಧಿಕಾರ ವಹಿಸಿಕೊಟ್ಟರು. ಜುಮ್ಮ ಮಸೀದಿಯ ನೂತನ ಮುತುವಲ್ಲಿ ಎಂ.ಬಿ. ಹಾಶಮ್, ಉಪಾಧ್ಯಕ್ಷ ಸೈಯದ್ ಸಾಬೀರ್ ಅಲಿ, ಕಾರ್ಯದರ್ಶಿ ದಾದಾವಲಿ ಖಜಾಂಚಿ ಯುಸೂಪ್ ಖಾನ್ ಸದಸ್ಯರಾದ ಡಿ. ಭಾಷಾ, ಅನ್ವರ್ ಬಾಷಾ, ಸುಲ್ತಾನ್ ಈ ವೇಳೆ ಹಾಜರಿದ್ದು ಅಧಿಕಾರ ವಹಿಸಿಕೊಂಡರು.
December 5, 2024