ರಾಷ್ಟ್ರೀಯ ಸ್ಕ್ವಾಯ್ ಪಂದ್ಯಾವಳಿಗೆ ಹೊನ್ನಾಳಿಯ ರೋಹಿಣಿ ಆಯ್ಕೆ

ರಾಷ್ಟ್ರೀಯ ಸ್ಕ್ವಾಯ್ ಪಂದ್ಯಾವಳಿಗೆ ಹೊನ್ನಾಳಿಯ ರೋಹಿಣಿ ಆಯ್ಕೆ

ಹೊನ್ನಾಳಿ, ಡಿ. 3 – ಇತ್ತೀಚೆಗೆ ಹರಿಹರದ ಗುರುಭವನದಲ್ಲಿ ಸ್ಕ್ವಾಯ್‍ ಅಸೋಸಿಯೇ ಷನ್ ಆಫ್ ಕರ್ನಾಟಕ ಆಯೋಜಿಸಿದ್ದ  ರಾಜ್ಯ ಸ್ಕ್ವಾಯ್ ಕ್ರೀಡೆ ಆಯ್ಕೆ ಪ್ರಕ್ರಿಯೆಯಲ್ಲಿ ಹೊನ್ನಾಳಿ ತಾಲ್ಲೂಕಿನ ಮೇಘನಾ ಮಹೇಶ್ವ ರಪ್ಪ ದಂಪತಿಯ ಪುತ್ರಿ ಶ್ರೀ ಸಾಯಿ ಗುರುಕುಲ ಶಾಲೆಯ ವಿದ್ಯಾರ್ಥಿನಿ ರೋಹಿಣಿ ಭಾಗವಹಿಸಿ 25ನೇ ರಾಷ್ಟ್ರೀಯ ಸ್ಕ್ವಾಯ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

14 ವರ್ಷ ವಯೋಮಿತಿ ಒಳಗಿನ  ಬಾಲಕಿಯರ ಲೋಬೋ ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆಯುವ ಮೂಲಕ ಡಿ. 7, 8 ಮತ್ತು 9 ರಂದು  ಹರಿಯಾಣದ  ಪುಂಚಕುಲದಲ್ಲಿ  ಸ್ಕ್ವಾಯ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಲಿರುವ 25ನೇ ರಾಷ್ಟ್ರೀಯ ಸ್ಕ್ವಾಯ್ ಪಂದ್ಯಾವಳಿಗೆ ಆಯ್ಕೆಯಾಗಿರುವ ರೋಹಿಣಿ, ಹೊನ್ನಾಳಿ ತಾಲ್ಲೂಕಿನಿಂದ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮೊದಲ ಕ್ರೀಡಾಪಟುವಾಗಿದ್ದಾರೆ. ರೋಹಿಣಿಯನ್ನು ಕೋಚ್ ರಮೇಶ್ ಮತ್ತು ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ನಾಟಕದ ಉಪಾಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದಿಸಿದ್ದಾರೆ.

error: Content is protected !!