ಪಿಜಿ ರಾಯರ ಮಠದಲ್ಲಿ ಧಾತ್ರಿ ಹವನ

ಪಿಜಿ ರಾಯರ ಮಠದಲ್ಲಿ ಧಾತ್ರಿ ಹವನ

ದಾವಣಗೆರೆ, ಡಿ.3- ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ `ಧಾತ್ರಿ ಹವನ’ ಮಹೋತ್ಸವವನ್ನು ಇದೇ ದಿನಾಂಕ 2 ರ ಸೋಮವಾರ ಪಂಡಿತ ಶ್ರೀ ಗೋಪಾಲಚಾರ್ ಮಣ್ಣೂರು ಇವರ ಪೌರೋಹಿತ್ಯ ಸಾರಥ್ಯದಲ್ಲಿ ಏರ್ಪಡಿಸಲಾಗಿತ್ತು. 

ಈ ಮಹೋತ್ಸವನ್ನು ಮಠದ ವ್ಯವಸ್ಥಾಪಕ ಸುತೀರ್ಥಕಟ್ಟಿ ಅವರ ಪುತ್ರ ಡಾ. ವೆಂಕಟರಾಮ್ ಕಟ್ಟಿ ದಂಪತಿ ಹಾಗೂ ಅನೇಕ ಸದ್ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು. 

ಸದರಿ ಮಹೋತ್ಸವದ ನಿಮಿತ್ತ ಮುಂಜಾನೆ 7.30 ರಿಂದ 8.30 ರವರೆಗೆ ವಾಯುಸ್ತುತಿ ಪಠಣ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ಗುರುರಾಜ್ (ರಾಜಣ್ಣ),  ಪ್ರಕಾಶ್ ನಾಡಿಗೇರ್,  ಪಲ್ಲಕ್ಕಿ ವಾಸುದೇವಾಚಾರ್, ಶ್ಯಾಮ್ ಗಟ್ಟಿಕರ್, ಗುರುರಾಜ್ ಮಣ್ಣೂರ್, ಶ್ರೀ ಕೃಷ್ಣಚಾರ್, ಭರಮಸಾಗರದ  ಬಿ.ಜೆ. ಅನಂತಪದ್ಮನಾಭ  ರಾವ್, ಎಂ.ಬಿ. ಬದರಿನಾಥ್, ಆರ್.ಡಿ. ಕುಲಕರ್ಣಿ, ಸುಶೀಲೇಂದ್ರ ದೇವಳೆ ಮತ್ತು ಅನೇಕ ಸದ್ಭಕ್ತರು ಭಾಗವಹಿಸಿದ್ದರು.

error: Content is protected !!