ದಾವಣಗೆರೆ, ಡಿ.3- ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಜೀವನ ಕೌಶಲ್ಯಗಳನ್ನು ಚಟುವಟಿಕೆಗಳ ಮೂಲಕ ಕಲಿಸುವುದರೊಂದಿಗೆ ಅವರ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಲಾಗುತ್ತಿದೆ ಎಂದು ಪೋದಾರ್ ಪ್ರೆಪ್ ಶಾಲೆ ಮುಖ್ಯ ಶಿಕ್ಷಕಿ ಕುಮಾರಿ ಮೊನಾಲಿಸಾ ಸಿಂಗ್ ಹೇಳಿದರು.
ಶಾಮನೂರಿನ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿರುವ ಪೋದಾರ್ ಪ್ರೆಪ್ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೋಷಕರಲ್ಲಿ ಹೆಚ್ಚಾಗಿ ಅಂಕಗಳ ಬಗ್ಗೆಯೇ ಅಧಿಕ ವ್ಯಾಮೋಹ ಇರುವುದು ಕಂಡುಬರುತ್ತಿದ್ದು, ಚಿಗುರುವ ವಯಸ್ಸಿನಿಂದಲೇ ಮಕ್ಕಳಿಗೆ ಕ್ರೀಡೆ ಹಾಗೂ ಕ್ರೀಡಾ ಸ್ಫೂರ್ತಿ ತುಂಬಬೇಕಾದುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು. ಅಂತರರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಇಮ್ತಿಯಾಜ್ ಅಹ್ಮದ್ ಮಾತನಾಡಿದರು.