ಪದ್ಮಶಾಲಿ ಸಮಾಜ ಸೇವಾ ಸಂಘಕ್ಕೆ ಎಸ್‌ಟಿಪಿ ತಿಪ್ಪೇಶ್ ಅಧ್ಯಕ್ಷ

ಪದ್ಮಶಾಲಿ ಸಮಾಜ  ಸೇವಾ ಸಂಘಕ್ಕೆ ಎಸ್‌ಟಿಪಿ ತಿಪ್ಪೇಶ್ ಅಧ್ಯಕ್ಷ

ಪದ್ಮಶಾಲಿ ಸಮಾಜ ಸೇವಾ ಸಂಘಕ್ಕೆ ಎಸ್‌ಟಿಪಿ ತಿಪ್ಪೇಶ್ ಅಧ್ಯಕ್ಷ - Janathavaniದಾವಣಗೆರೆ, ಡಿ. 3- ನಗರದ ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಬೊಮ್ಮ ತಿಪ್ಪೇಸ್ವಾಮಿ (ಎಸ್‌ಟಿಪಿ) ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಶ್ರೀ ಮಾರ್ಕಂಡೇ ಶ್ವರ ದೇವಸ್ಥಾನದಲ್ಲಿ ನಿನ್ನೆ ನಡೆದ ಪದ್ಮಶಾಲಿ ಸಮಾಜ ಸೇವಾ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಪ್ರಧಾನ ಕಾರ್ಯದರ್ಶಿಯಾಗಿ ವದ್ದಿ ನರಸಿಂಹಮೂರ್ತಿ, ಉಪಾಧ್ಯಕ್ಷರುಗಳಾಗಿ ಅರಣಿ ನಿಂಗಪ್ಪ, ಸೇಪೂರ್ ಸತ್ಯನಾರಾಯಣ, ಸಹ ಕಾರ್ಯದರ್ಶಿಯಾಗಿ ಡಿ.ಎಸ್.ಕೆ. ಪರಶುರಾಮ ಆಯ್ಕೆಯಾಗಿದ್ದಾರೆ.

ಖಚಾಂಚಿಯಾಗಿ ಮಂಚಿ ನಾಗರಾಜ್, ಲೆಕ್ಕ ಪರಿಶೋಧಕರಾಗಿ ವಾಸಿ ರವಿಕುಮಾರ್, ಸಂಚಾಲಕರಾಗಿ ಟಿ. ಪರಶುರಾಮ್, ಸಂಘಟನಾ ಕಾರ್ಯದರ್ಶಿಯಾಗಿ ನಂದಿಗಾವಿ ಪರಶುರಾಮ್ ಆಯ್ಕೆಯಾಗಿದ್ದಾರೆ.

ಮಂಚಿ ತಿಪ್ಪೇಸ್ವಾಮಿ, ಸಂಗಿತ್ ರಮೇಶ್, ಪೊರಾಳ್ ಅಂಜಿನಪ್ಪ, ಎಸ್. ಅಣ್ಣಪ್ಪ, ಲಿಂಗಂಪಲ್ಲಿ ವೆಂಕಟೇಶ್, ಹೊಸಮನಿ ಮಂಜುನಾಥ, ನೀಲಿ ಲಕ್ಷ್ಮಣ, ಎಸ್.ಕೆ. ಬಸವರಾಜ್, ಮಂಜುನಾಥ ವಿಶ್ವನಾಥ, ಗುರುಂ ತಿಮ್ಮರಾಜು, ಮಂಚಿ ಚಂದ್ರು, ಬೊಮ್ಮ ರಂಗನಾಥ್ ಅವರುಗಳು ನಿರ್ದೇಶಕರುಗಳಾಗಿದ್ದಾರೆ.

error: Content is protected !!