ಬಾಪೂಜಿ ಬ್ಯಾಂಕಿನ ನಿರ್ದೇಶಕರಾಗಿ ಡಾ. ಸುರೇಂದ್ರ ಶೆಟ್ಟಿ

ಬಾಪೂಜಿ ಬ್ಯಾಂಕಿನ ನಿರ್ದೇಶಕರಾಗಿ ಡಾ. ಸುರೇಂದ್ರ ಶೆಟ್ಟಿ

ದಾವಣಗೆರೆ, ನ.2- ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಡಾ. ಸುರೇಂದ್ರ ಶೆಟ್ಟಿ ಅವರನ್ನು ಬ್ಯಾಂಕಿನ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ, ಬ್ಯಾಂಕಿನ ಉಪಾಧ್ಯಕ್ಷರೂ ಆದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ವಾಗತಿಸಿ, ಸನ್ಮಾನಿಸಿದರು. 

ಬ್ಯಾಂಕಿನ ಹಿರಿಯ ನಿರ್ದೇಶಕರಾದ ಡಾ. ಅಥಣಿ ಎಸ್.ವೀರಣ್ಣ, ಡಾ. ಶಂಶಾದ್ ಬೇಗಂ, ಡಾ. ಪಿ.ಶಶಿಕಲಾ, ಡಾ. ಬಿ. ಪೂರ್ಣಿಮಾ, ಡಾ. ಹೆಚ್.ಶಿವಪ್ಪ, ಡಾ. ಕೆ.ಹನುಮಂತಪ್ಪ, ಡಾ. ಅರುಣ್ ಕುಮಾರ್, ಡಾ. ಸಿ.ವೈ.ಸುದರ್ಶನ್, ಡಾ. ಎಂ.ಎಂ.ಲಿಂಗರಾಜ್, ಕೆ.ಬೊಮ್ಮಣ್ಣ, ಕೆ.ಎಸ್.ವೀರೇಶ್, ಡಾ. ಜಿ.ಎಸ್.ಯತೀಶ್, ಡಾ. ಜಿ.ವೈ.ವಿಶ್ವನಾಥ್, ಜೆ. ಅನಿತಾ ಕುಮಾರಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಬಸವರಾಜ್, ಸಲಹೆಗಾರರಾದ ಎಸ್.ಕಲ್ಲಪ್ಪ, ಜಿ.ವಿ.ಶಿವಶಂಕರ್, ಡಿ.ವಿ.ರವೀಂದ್ರ, ಕೆ.ಎನ್. ನವೀನ್ ಮುಂತಾದವರು  ಉಪಸ್ಥಿತರಿದ್ದರು.

error: Content is protected !!