ಹರಪನಹಳ್ಳಿ, ಡಿ. 2 – ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಇದೇ ದಿನಾಂಕ 7 ರಂದು ತಾಲ್ಲೂಕು ಕನಕ ನೌಕರರ ಸಂಘ, ಬೀರೇಶ್ವರ ಕುರುಬ ಸಂಘ ಹಾಗೂ ಯುವ ಘಟಕದ ಸಹಯೋಗದೊಂದಿಗೆ ಭಕ್ತ ಶ್ರೀ ಕನಕದಾಸರ 537ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಕ ನೌಕರರ ಸಂಘದ ಅಧ್ಯಕ್ಷ ವೈ. ಸಿದ್ದಪ್ಪ ಹರಿಂದ್ರಾಳ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಅಂದು ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 80 ಹಾಗೂ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಇಬ್ಬರು ಸಾಧಕರಿಗೆ ಕನಕ ಪ್ರಶಸ್ತಿ ನೀಡಲಾಗವುದು ಎಂದು ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು 5 ಕೊನೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕನಕ ನೌಕರರ ಸಂಘದ ಅಧ್ಯಕ್ಷ ವೈ. ಸಿದ್ದಪ್ಪ ಹರಿಂದ್ರಾಳ-9731833109, ಗೌರವಾಧ್ಯಕ್ಷ ಎಸ್. ರಾಮಪ್ಪ-9740592278, ಕಾರ್ಯದರ್ಶಿ ಕಿರಣ್ ಕುಮಾರ್-9611551091 ಇವರನ್ನು ಸಂಪರ್ಕಿಸಬಹುದು.