ತೆರಿಗೆ, ಹಣಕಾಸು, ಸ್ಥಾಯಿ ಸಮಿತಿಯ ಕಂದಾಯ ವಸೂಲಾತಿ ಪರಿಶೀಲನಾ ಸಭೆ

ತೆರಿಗೆ, ಹಣಕಾಸು, ಸ್ಥಾಯಿ ಸಮಿತಿಯ ಕಂದಾಯ ವಸೂಲಾತಿ ಪರಿಶೀಲನಾ ಸಭೆ

ದಾವಣಗೆರೆ, ಡಿ.2- ಮಹಾನಗರ ಪಾಲಿಕೆಯ ವಲಯ 3 ರ ಕಚೇರಿಯಲ್ಲಿ ತೆರಿಗೆ, ಹಣಕಾಸು, ಸ್ಥಾಯಿ ಸಮಿತಿಯ ಕಂದಾಯ ವಸೂಲಾತಿ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹುರ್‌ ಬಾನು (ಪಂಡಿತ್) ಅವರು ಇಂದು ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇ-ಖಾತಾ ಫೈಲ್ಸ್ ಬಾಕಿ, ಕಂದಾಯ ವಸೂಲಾತಿ ಕುರಿತಂತೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಮೇಯರ್‌ ಕೆ. ಚಮನ್‌ಸಾಬ್‌, ಆಯುಕ್ತರಾದ ಶ್ರೀಮತಿ ರೇಣುಕಾ, ಸದಸ್ಯರುಗಳಾದ ಎ. ನಾಗರಾಜ್‌, ಜಿ.ಎಸ್‌. ಮಂಜುನಾಥ್‌, ಪ್ರಸನ್ನಕುಮಾರ್‌, ಪಂಡಿತ್‌ ನರೇಂದ್ರ, ಉಪಆಯುಕ್ತರಾದ ಶ್ರೀಮತಿ ಲಕ್ಷ್ಮಿ, ಅಧಿಕಾರಿಗಳಾದ ಈರಮ್ಮ, ಪಾಂಡುರಾಜ್‌ ಮತ್ತು ಕೃಷ್ಣ ಉಪಸ್ಥಿತರಿದ್ದರು.

error: Content is protected !!