ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ದೇವರಬೆಳಕೆರೆ ರುದ್ರಪ್ಪ

ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ದೇವರಬೆಳಕೆರೆ ರುದ್ರಪ್ಪ

ಮಲೇಬೆನ್ನೂರು, ಡಿ. 2- ದಾವಣಗೆರೆ ಜಿಲ್ಲಾ ಗ್ರಾಮ ಸಹಾಯಕರ ಸಂಘದ   ಅಧ್ಯಕ್ಷರಾಗಿ ದೇವರಬೆಳಕೆರೆಯ ಕೆ. ರುದ್ರಪ್ಪ ಅವರನ್ನು ಭಾನುವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆದ ದಾವಣಗೆರೆ ಜಿಲ್ಲೆಯ ಗ್ರಾಮ ಸಹಾಯಕರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಕೆ. ರುದ್ರಪ್ಪ ಅವರು ಕಳೆದ 22 ವರ್ಷಗಳಿಂದ ಹರಿಹರ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಜಿಲ್ಲಾ ಸಂಘದ ಗೌರವಾಧ್ಯಕ್ಷರಾಗಿ ಡಿ. ರಮೇಶ್, ಉಪಾಧ್ಯಕ್ಷರಾಗಿ ಜೆ.ಪಿ. ತಿಪ್ಪೇಶ್, ಆರ್. ಸಚ್ಚಿನ್, ಮಹಾಂತೇಶ್, ಪ್ರಧಾನ ಕಾರ್ಯದರ್ಶಿಯಾಗಿ ಜೆ. ರಾಜು, ಖಜಾಂಚಿಯಾಗಿ ಹುಲಿಗೆಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಸಿ. ಚನ್ನೇಶ್, ಸಹ ಕಾರ್ಯದರ್ಶಿಯಾಗಿ ಮಂಜಮ್ಮ ಅವರು ಆಯ್ಕೆಯಾಗಿದ್ದಾರೆ.

ಇದೇ ವೇಳೆ ಹರಿಹರ ತಾ. ಗ್ರಾಮ ಸಹಾಯಕರ ಸಂಘದ ನೂತನ ಅಧ್ಯಕ್ಷರನ್ನಾಗಿ ಅಮರಾವತಿಯ ಅಜ್ಜಪ್ಪ ಅವರನ್ನು ಆಯ್ಕೆ ಮಾಡಲಾಯಿತು.

error: Content is protected !!