ದಾವಣಗೆರೆ, ಡಿ.2- ಇಲ್ಲಿಗೆ ಸಮೀಪದ ಲೋಕಿಕೆರೆ ರಸ್ತೆಯಲ್ಲಿ ಮೊನ್ನೆ ನವೆಂಬರ್ 29ರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸುರೇಶ್ ಅಲಿಯಾಸ್ ಆರ್.ಎಕ್ಸ್. ಸೂರಿ ಎಂಬಾತ ಮೃತಪಟ್ಟಿದ್ದಾನೆ.
ಸುರೇಶ್, ತಾನು ಚಲಾಯಿಸುತ್ತಿದ್ದ ಕೆಎ 17 – ಇಡಿ 2814 ಸಂಖ್ಯೆಯ ಮೋಟಾರ್ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿದ್ದು, ತೀವ್ರ ರಕ್ತಸ್ರಾವ ಗಾಯಗೊಂಡಿದ್ದ ಆತನನ್ನು ಸಿ.ಜಿ. ಆಸ್ಪತ್ರೆಗೆ ದಾಖಲಾಯಿಸಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾನೆ.
ಮೃತ ಸುರೇಶ್, ಬೆಂಗಳೂರಿನ ಶಿವಾಜಿ ನಗರ, ರಾಮನಗರ ಎಂದಷ್ಟೇ ಹೇಳಿಕೊಂಡು ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಕ್ರಾಸ್ ಹತ್ತಿರದಲ್ಲಿರುವ ಬಂಡೆ ಹೋಟೆಲ್‌ನಲ್ಲಿ ಕಳೆದ 4-5 ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಹೇಳಲಾಗಿದೆ.
ಸಾವಿಗೀಡಾಗಿರುವ ಸುರೇಶ್ ಸಂಬಂಧಿಕರು ಹದಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.